ಸುದ್ದಿಬಿಂದು ಬ್ಯೂರೋ ವರದಿ
ಸಿದ್ದಾಪುರ : ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರ ಕಳ್ಳತನ ಮಾಡಿದ ಠಾಣೆಗೇರಿ, ಬೇಡ್ಕಣಿಯ ವ್ಯಕ್ತಿಯನ್ನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಗಣಪತಿ ಅಲಿಯಾಸ್ ಗಣೇಶ ಕೃಷ್ಣ ನಾಯ್ಕ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ ಈತ ಬೇಡ್ಕಣಿ ,ಠಾಣೆಗೇರಿಎಂಬಲ್ಲಿ ಜಯಂತ ರಾಮಾ ನಾಯ್ಕ ಎಂಬುವವರು ಮನೆಗೆ ಬೀಗ ಹಾಕಿ ಗದ್ದೆಗೆ ಹೋಗಿದ್ದ ಸಮಯದಲ್ಲಿ ಬೀಗ ಮುರಿದು ಒಳಗೆ ನುಗ್ಗಿ ಗೊದ್ರೆಜ್ ಪಕ್ಕದಲ್ಲಿ ಚೀಲದಲ್ಲಿಟ್ಟಿದ್ದ ಗೊದ್ರೆಜ್ ಚಾವಿಯಿಂದ ಗೊದ್ರೆಜ ಬಾಗಿಲನ್ನ ತೆಗೆದು ಅದರಲ್ಲಿದ್ದ 10 ಗ್ರಾಂ ತೂಕದ ಬಂಗಾರದ ಬುಗಡಿ ಸರಪಳಿ 5.5 ಗ್ರಾಂ ಬಂಗಾರದ ಕುಡುಕು, 2.5 ಗ್ರಾಂ ತೂಕದ ಬಂಗಾರದ ಮಾಟಿಲ, 3 ಗ್ರಾಂ ತೂಕದ ಬಂಗಾದ ಉಂಗುರ ಸೇರಿ ಒಟ್ಟು 1.26,000/-ರೂ ಬೆಲೆಯ ಬಂಗಾರದ ಆಭರಣವನ್ನ ಕಳ್ಳತನ ಮಾಡಿದ್ದ
ಈ ಬಗ್ಗೆ ಜಯಂತ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ,ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ ನಾಯ್ಕ, ಸಿಪಿಐ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ. ಜೆ.ಬಿ. ಸೀತಾರಾಮ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್‌ಠಾಣಿ, ಅನೀಲ ಬಿ.ಎಂ. ಪಿ.ಎಸ್.ಐ ಸಿದ್ದಾಪುರ ಪೊಲೀಸ್‌ಠಾಣೆ, ಗೀತಾ ಶಿರ್ಶಿಕರ ಪಿ.ಎಸ್.ಐ ಸಿದ್ದಾಪುರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ರಮೇಶ ಕೂಡಲ್, ದೇವರಾಜ ಟಿ ನಾಯ್ಕ, ಮಂಜಪ್ಪ ಟಿ ತಂಡ ಕಳ್ಳತನದ ಆರೋಪಿಯನ್ನ ಬಂಧಿಸಿದ್ದಾರೆ.
ಗಮನಿಸಿ