ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ: ಎರಡನೇ ತರಗತಿ ವಿದ್ಯಾರ್ಥಿನಿ ಓರ್ವಳು ಶಾಲಾ ಶೌಚಾಲಯದಲ್ಲಿ ಮೂತ್ರವಿಸರ್ಜನೆಗೆ ಹೋಗಿದ್ದ ವೇಳೆ ನೆಲಕ್ಕೆ ಬಿದ್ದ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸಾನ್ವಿ ಗೌಳಿ (7)ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.ವಿದ್ಯಾರ್ಥಿನಿ ಮೂತ್ರವಿಸರ್ಜನೆಗೆ ತೆರಳಿದ್ದ ವೇಳೆ, ಶೌಚಾಲಯದಲ್ಲಿ ಕೆಳಕ್ಕೆ ಹರಿದು ಬಿದ್ದ ವಿದ್ಯುತ್ ಲೈನ್ ತಗುಲಿ ಮೃತಪಟ್ಟಿದ್ದಾಳೆ. ಶಾಲೆಯ ಬೋರ್ವೇಲ್ ಗಾಗಿ ಅಳವಡಿಸಲಾಗಿದ್ದ ವಿದ್ಯುತ್ ಲೈನ್ ಕೆಳಕ್ಕೆ ಬಿದ್ದಿದರಿಂದ ಅನಾಹುತ ಉಂಟಾಗಿದೆ.ಶಾಲಾ ಶಿಕ್ಷಕರ ಬೇಜವಾಬ್ದಾರಿ ಘಟನೆ ಕಾರಣ ಎಂದು ಸ್ಥಳೀರು ಆರೋಪಿಸಿದ್ದಾರೆ.
ಈ ಕೆಳಗಿನ ಸುದ್ದಿ ಮೇಲೆ ಕ್ಲಿಕ್ ಮಾಡಿ ಇನ್ನಷ್ಟು ಸುದ್ದಿಯನ್ನ ಓದಿ