ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿದ ಅನೇಕ ನಾಯಕರು ರಾಜಕೀಯವಾಗಿ ಮುಲೆಗುಂಪು ಆಗಿರೋದನ್ನ ರಾಜ್ಯದ ಜನ ನೋಡುತ್ತಲೆ ಬಂದಿದ್ದಾರೆ. ಈ ನಡುವೆ ಬಸವನಗೌಡ ಯತ್ನಾಳ ಹೊಸ ಪಕ್ಷ ಕಟ್ಟಿದರೆ ರಾಜಕೀಯವಾಗಿ ನೆಲೆ ಕಳೆದುಕೊಳ್ಳುವುದನ್ನ ತಳ್ಳಿ ಹಾಕುವಂತಿಲ್ಲ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಈ ಹಿಂದೆ ರಾಜ್ಯದಲ್ಲಿ ಯತ್ನಾಳರಂತೆ ಉಚ್ಚಾಟನೆಗೊಂಡ ನಾಯಕರು,ಪಕ್ಷದಿಂದ ಮುನಿಸುಕೊಂಡು ಹೊರ ನಡೆದ ಅನೇಕ ನಾಯಕರು ಪ್ರಾದೇಶಿಕ ಪಕ್ಷವನ್ನ ಕಟ್ಟಿ ಏನಾಗಿದ್ದಾರೆ ಎನ್ನುವುದು ರಾಜ್ಯದ ಜನ ಇನ್ನೂ ಮರೆತ್ತಿಲ್ಲ..ಯಡಿಯ್ಯೂರಪ ಅವರು ಬಿಜೆಪಿಯಿಂದ ಹೊರ ಬಂದು ಕೆಜಿಪಿ ಪಕ್ಷವನ್ನ ಕಟ್ಟಿ ಒಂದೆ ಚುನಾವಣೆ ಬಳಿಕ ನೆಲೆ ಕಂಡುಕೊಳ್ಳಲಾಗದೆ ಬಿಜೆಪಿಗೆ ಮರಳಿದ್ದಾರೆ.

ಮಾಜಿ ಸಿಎಂಗಳಾದ ಎಸ್ ಬಂಗಾರಪ್ಪ,ಬಿ ಎಸ್ ಯಡಿಯೂರಪ್ಪ,ಹಾಲಿ ಸಿಎಂ ಸಿದ್ದರಾಮಯ್ಯ ಅವರು ಸಹ ಪಕ್ಷ‌ಕಟ್ಟಿ ಕೈ ಸುಟ್ಟುಕೊಂಡು ಪುನಃ ರಾಷ್ಟ್ರೀಯ ಪಕ್ಷಕ್ಕೆ ಮರಳಿರುವುದನ್ನ ರಾಜ್ಯದ ಜನ ಇನ್ನೂ ಮರೆತಿಲ್ಲ. ಇನ್ನೂ ಪ್ರಭಾವಿ ನಾಯಕನಾಗಿದ್ದ ಎಸ್ ಬಂಗಾರಪ್ಪ ಅವರು ಎರಡು ಬಾರಿ ಪಕ್ಷ ಕಟ್ಟಿದರು ಯಶ್ವಸ್ಸು ಕಾಣಲು ಸಾಧ್ಯವಾಗಲ್ಲ. ಇನ್ನೂ ಹಾಲಿ ಸಿಎಂ ಸಿದ್ದರಾಮಯ್ಯ ಅವರು ಈ ಮೊದಲು ದೇವೇಗೌಡರ ಬಣದಿಂದ ಹೊರಬಂದ ಸಿದ್ದರಾಮ್ಯ ಅವರು ಅಂದು ಭಾರತ ಪ್ರಗತಿಪರ ಜನತಾದಳ ಪಕ್ಷವನ್ನ ಕಟ್ಟಿದ್ದರು ಸಹ ಚುನಾವಣಾ ಪೂರ್ವದಲ್ಲೇ ಪಕ್ಷ ವಿಸರ್ಜನೆ ಮಾಡಿ ಕಾಂಗ್ರೇಸ್ ಸೇರಿಕೊಂಡಿದ್ದರು.

ಯತ್ನಾಳ ರೀತಿಯಲ್ಲೆ ಬಿಜೆಪಿಗೆ ಸೆಡ್ಡು ಹೊಡೆದು ಹೊರ ಬಂದ ಶ್ರೀರಾಮುಲು ಬಿಎಸ್‌ಆರ್ ಕಾಂಗ್ರೇಸ್ ಪಕ್ಷವನ್ನ ಕಟ್ಟಿ ನಾಲ್ಕು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಬಳಿಕ ಸಂಘಟನೆ ಕಷ್ಟ ಎಂದು ತಿಳಿದ ಶ್ರೀರಾಮುಲು ಸಹ ಬಿಜೆಪಿಗೆ ಮರಳಿದ್ದಾರೆ.

ಇನ್ನೂ ಗಣಿ ಹಗರಣದಲ್ಲಿ ಜೈಲಿನಿಂದ ವಾಪಸ್ ಆದ ಜರ್ನಾಧನ ರೆಡ್ಡಿ ಅವರನ್ನ ಬಿಜೆಪಿ ತನ್ನ ಹತ್ತಿರಕ್ಕೂ ಸುಳಿಸಿಕೊಳ್ಳದೆ ಇದ್ದ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನ ಕಟ್ಟಿ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಮತಗಳನ್ನ ಇಬ್ಬಾಗ ಮಾಡಿದ್ದರು. ಆದರೆ ಮುಂದೆ ಪಕ್ಷ ಕಟ್ಟುವುದು ಸಾಧ್ಯವಿಲ್ಲ ಎನ್ನುವುದನ್ನ ಅರಿತ ರೆಡ್ಡಿ ತಮ್ಮ ಪಕ್ಷವನ್ನ ಬಿಜೆಪಿ ಜೊತೆಯಲ್ಲಿ ವಿಲೀನ ಮಾಡಿಕೊಂಡು ಸುಮ್ಮನಾಗಿದ್ದಾರೆ‌…

ಪ್ರಾದೇಶಿಕ ಪಕ್ಷವನ್ನ ಕಟ್ಟಿದ ಅದೆಷ್ಟೋ ಘಟಾನುಘಟಿ ನಾಯಕರು ರಾಜ್ಯದಲ್ಲಿ ಏನಾಗಿ ಹೋಗಿದ್ದಾರೆ ಎನ್ನುವ ತಾಜಾ ಉದಾರಣೆಗಳು ಇರುವಾಗಲೇ ತನ್ನಷ್ಟಕ್ಕೆ ತಾನೇ ಹಿಂದೂ ಹೂಲಿ ಎಂದು ಹೇಳಿಕೊಂಡ ಯತ್ನಾಳ ಅವರು ಪ್ರಾದೇಶಿಕ (ಕೇಸರಿ ಧ್ವಜ.?) ಪಕ್ಷವನ್ನ ಕಟ್ಟಿ ಚುನಾವಣೆ ಎದುರಿಸಿದರೆ ಈ ಹಿಂದೆ‌ ಪ್ರಾದೇಶಿಕ ಪಕ್ಷ ಕಟ್ಟಿದವರ ಸಾಲಿಗೆ ಯತ್ನಾಳ ಸೇರಲಿದ್ದಾರೆ ಎನ್ನುವುದಲ್ಲಿ ಅನುಮಾನವಿಲ್ಲ ಎಂದಿದ್ದಾರೆ ವಿಶ್ಲೇಷಕರು.

ಇದನ್ನೂ ಓದಿ

.