ಸುದ್ದಿಬಿಂದು ಬ್ಯೂರೋ
ಹೊನ್ನಾವರ : ಅದೆಷ್ಟೋ ಸಚಿವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ವಿಧಾನಸೌಧದಿಂದಲ್ಲೆ ಸರಕಾರಿ ವಾಹನದಲ್ಲಿ ಪ್ರಯಾಣ ಮಾಡಿದ್ದಾರೆ. ಆದರೆ ಭಟ್ಕಳ ಕ್ಷೇತ್ರದ ಶಾಸಕ, ಮಂಕಾಳು ವೈದ್ಯ ಅವರು ಸಚಿವರಾದ ಬಳಿಕ ಪುರಾಣ ಪ್ರಸಿದ್ಧವಾಗಿರುವ ಇಡಗುಂಜಿ ದೇವಾಲಯದಿಂದಲ್ಲೆ ಸರಕಾರಿ ವಾಹನವನ್ನ ಏರಿ ಪ್ರಯಾಣ ಆರಂಭಿಸಿದ್ದಾರೆ.
ನಿನ್ನೆ ಶನಿವಾರ ಬೆಂಗಳೂರಿನಲ್ಲಿ ಪ್ರಮಾಣವಚ ಸ್ವೀಕರಿಸಿದ ಸಚಿವ ಮಂಕಾಳು ವೈದ್ಯ ಅವರು ಇಂದು ಬೆಳಿಗ್ಗೆ ಬೆಂಗಳೂರಿನಿಂದ ತಮ್ಮ ಖಾಸಗಿ ಕಾರನಲ್ಲಿಯೇ ಬೆಂಗಳೂರಿನಿಂದ ಹೊನ್ನಾವರದ ಇಡಗುಂಜಿ ದೇವಾಲಯಕ್ಕೆ ಆಗಮಿಸಿದ್ದು, ದೇವಾಲಯಲ್ಲಿ ಪೂಜೆ ಸಲ್ಲಿಸಿದ ಸಚಿವರು ಬಳಿಕ ಸರಕಾರದಿಂದ ಸಚಿವರಿಗೆ ನೀಡಲಾಗಿರುವ ಕಾರ ಗೆ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ ಅವರು ನಾನು ಯಾವುದೇ ಕೆಲಸ ಆರಂಭಿಸುವುದು ಇದ್ದರೂ ಸಹ ಅದು ಇಡಗುಂಜಿ ಮಹಾಗಣಪತಿ ದೇವಸ್ಥಾನದಿಂದಲ್ಲೆ. ನಾನು ಕಷ್ಟದಲ್ಲಿ ಇದ್ದಾಗಲೂ ಇಲ್ಲಿಗೆ ಬರತ್ತಿದ್ದೆ. ಸುಖದಲ್ಲಿ ಇದ್ದಾಗಲೂ ಇಲ್ಲಿಗೆ ಬರತ್ತಿದೆ. ಮಹಾಗಣಪತಿ ಯಾವತ್ತು ನನ್ನ ಕೈ ಬಿಟ್ಟಿಲ್ಲ.ಹೀಗಾಗಿ ನನ್ನ ಜೀವನ ಇಲ್ಲಿದ್ದಲೆ ಆರಂಭವಾಗುತ್ತದೆ ಎಂದಿದ್ದಾರೆ