ಸುದ್ದಿಬಿಂದು ಬ್ಯೂರೋ
ಅಂಕೋಲಾ : ಸ್ಪಿರಿಟ್ ತುಂಬಿದ ಟ್ಯಾಂಕರ್ ಹಾಗೂ ಡಾಂಬರ್ ಟ್ಯಾಂಕರ್ ನಡುವೆ ಮುಖಾಮುಖಿ ಅಪಘಾತ ಉಂಟಾಗಿ ಸ್ಪಿರಿಟ್ ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಮದಳ್ಳಿ ಟೋಲ್ ನಾಕಾ ಬಳಿ ಸಂಬಂಧಿಸಿದೆ.
ಅಪಘಾಯದಲ್ಲಿ ಸ್ಪಿರಿಟ್ ಟ್ಯಾಂಕರ್ ಚಾಲಕ ಗಂಭೀರವಗಿ ಗಾಯಗೊಂಡಿದ್ದಾನೆ. ಸ್ಪಿರಿಟ್ ತುಂಬಿದ ಟ್ಯಾಂಕರ್ ತೆಲಂಗಾಣದಿಂದ ಗೋವಾ ರಾಜ್ಯಕ್ಕೆ ಹೋಗುತ್ತಿದ್ದು, ಇದೆ ವೇಳೆ ಕಾರವಾರ ಕಡೆಯಿಂದ ಅಂಕೋಲಾ ಕಡೆ ಬರುತ್ತಿದ್ದ ಡಾಂಬರ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಎರಡು ಟ್ಯಾಂಕರ್ ಮುಂಭಾಗ ಜಖಂಗೊಂಡಿದೆ.ಇನ್ನೂ ಅಪಘಾತದಿಂದಾಗಿ ಕೆಲ ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ಸಮಸ್ಯೆ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಳಿದ ವಾಹನ ಸಂವಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ಇನ್ನೂ ತೆಲಂಗಾಣದಿಂದ ಸ್ಪಿರಿಟ್ ತುಂಬಿದ ಐದು ಟ್ಯಾಂಕರ್ ಗೋವಾ ಕಡೆ ಚಲಿಸುತ್ತಿತ್ತು. ಎನ್ನಲಾಗಿದೆ. ಸ್ಪಿರಿಟ್ ಟ್ಯಾಂಕರ್ ಅಫಘಾತವಾಗಿದೆ ಎನ್ನುವ ಸುದ್ದಿ ತಿಳಿದ ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಸ್ಪಿರಿಟ್ ನ್ನ ತಪಾಸಣೆಗಾಗಿ ಕಳುಹಿಸಿ ಅದರ ವರದಿ ಬಂದ ಬಳಿಕ ಟ್ಯಾಂಕರ್ ಗೋವಾಕ್ಕೆ ಹೋಗಲು ಅನುಮತಿ ನೀಡುತ್ತಾರ ಇಲ್ಲ. ತೆಲಂಗಾಣದಿಂದ ತಂದಿರುವ ವರದಿಯ ಆಧಾರದ ಮೇಲೆ ಟ್ಯಾಂಕರ್ ನ್ನ ಬಿಟ್ಟು ಕಳುಹಿಸುತ್ತಾರ ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಾಗಿದೆ.