ಸುದ್ದಿಬಿಂದು ಬ್ಯೂರೋ ವರದಿ
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ. ತನಿಖೆಗೆ ಆಗಮಿಸುವ ವೇಳೆ ಅವರು ಸರಕಾರಿ ವಾಹನವನ್ನ ಬಿಟ್ಟು , ಯಾವುದೇ ರೀತಿಯ ಅಂಜಿಕೆ, ಭಯವಿಲ್ಲದೇ ಎಂದಿನಂತೆ ತಮ್ಮ ಪವರ್ ಪುಲ್ ಶೈಲಿಯಲ್ಲಿ ಖಾಸಗಿ ವಾಹನದಲ್ಲಿ ಆಗಮಿಸಿದ್ದಾರೆ.
ಸುಮಾರು 9-30ರ ವೇಳೆ ಸರಕಾರಿ ವಸತಿ ಗೃಹಕ್ಕೆ ಆಗಮಿಸಿದ ಸಿಎಂ ಉಪಹಾರ ಸೇವಿಸಿ ಇದೀಗ ಖಾಸಗಿ ವಾಹನದಲ್ಲಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ. ತನಿಖೆ ಆಗಮಿಸಿರುವ ಸಿಂಎಂ ಅವರನ್ನ ಪ್ರಶ್ನೆ ಮಾಡಲು ಲೋಕಾಯುಕ್ತ ಅಧಿಕಾರಿಗಳು ಒಂದಿಷ್ಟು ಪ್ರಶ್ನೆಗಳನ್ನ ಸಹ ಸಿದ್ದಪಡಿಸಿಕೊಂಡಿದ್ದಾರೆ. ಸಿಎಂ ಅವರಿಗೆ ಎದುರಾಗಲಿರುವ ಪ್ರಶ್ನೆಗಳು ಯಾವೇಲ್ಲಾ ಇದೆ ಎನ್ನುವ ಡಿಟೇಲ್ಸ್ ಇಲ್ಲಿದೆ.
ಸಿಎಂ ಸಿದ್ದರಾಮಯ್ಯಗೆ ಎದುರಾಗಲಿರುವ ಪ್ರಶ್ನೆಗಳೇನು..?
ಮುಡಾ ಪ್ರಕರಣದಲ್ಲಿ A1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ. 14 ನಿವೇಶನಗಳನ್ನ ನಿಮ್ಮ ಪತ್ನಿ ಮುಡಾದಿಂದ ಪಡೆದರುವುದು ನಿಮ್ಮ ಪ್ರಭಾವದಿಂದ ಎಂಬ ಆರೋಪ ಇದೆ? ನಿಮ್ಮ ಅಧಿಕಾರದವನ್ನ ದುರುಪಯೋಗ ಪಡಿಸಿಕೊಂಡಿದ್ದೀರಾ ಎಂಬ ಆರೋಪ ಇದೆ? ನೀವು ಅಧಿಕಾರದಲ್ಲಿದ್ದಾಗಲೇ ನಾಲ್ಕು ಹಂತದಲ್ಲಿ ಪ್ರಭಾವ ನಡೆದಿಯೆಂತೆ?, ಭೂಮಿ ಕಳೆದಕೊಂಡ ಬಡವಾಣೆ ಬಿಟ್ಟು ಸಮಾನಾಂತರ ಬಡವಾಣೆಯಲ್ಲಿ ಹೊರತುಪಡಿಸಿ ವಿಜಯನಗರದಲ್ಲಿ ನಿವೇಶನ ಬೇಕು ಅರ್ಜಿ ಹಾಕಿದ್ರಾ?, ವಿಜಯನಗರದಲ್ಲಿ 14 ನಿವೇಶನ ನಿಮ್ಮ ಪತ್ನಿಗೆ ಹೆಸರಿಗೆ ಬಂದಿದ್ದು ನಿಮಗೆ ಗೊತ್ತಿದ್ಯಾ?
ನಿಮ್ಮ ಬಾಮೈದ ನಿಮ್ಮ ಪತ್ನಿಗೆ ಭೂಮಿಯನ್ನ ಅರಿಸಿಣ ಕುಂಕುಮಕ್ಕೆ ದಾನ ಕೊಟ್ಟಾಗ ನಿಮಗೆ ಮಾಹಿತಿ ಇತ್ತಾ? ಭೂಮಿಯ ವಿವಾದದ ಹಿನ್ನೆಲೆ ನಿಮಗೆ ಯಾವಾಗ ಗೊತ್ತಾಯಿತು? ನಿವೇಶನ ಹಂಚಿಕೆ ಮಾಡುವಾಗ ಮುಡಾ ಆಯುಕ್ತರನ್ನ ಸಂಪರ್ಕ ಮಾಡಿದ್ದಾರಾ. ಹೇಗೆ ಪುತ್ರ ಯತೀಂದ್ರ ನಿವೇಶನ ಹಂಚಿಕೆ ಸಂಧರ್ಭದಲ್ಲಿ ಮುಡಾ ಸಭೆಯಲ್ಲಿ ಇದ್ದರು ಎಂಬ ಆರೋಪ ಇದೆ? ಆರ್ಥಿಕ ಲಾಭಕ್ಕಾಗಿ ವಿಜಯನಗರ ವ್ಯಾಪ್ತಿಯಲ್ಲಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಇದೆ? ತಾವು ಟ್ವೀಟ್ ಮಾಡಿದಂತೆ ವೈಟ್ನರ್ ಹಿಂದಿರುವ ಪದಗಳು ಏನು?
ನಿಮ್ಮ ಪತ್ನಿ ಪಾರ್ವತಿ ಅವರು ಕೊಟ್ಟ ಪತ್ರದಲ್ಲಿ ಇದ್ದ ಬದಲಿ ನಿವೇಶನದ ಮಾಹಿತಿ ಹೇಳಿ? ನೀವು ಭೂಮಿಗೆ 65 ಕೋಟಿ ಹಣ ಪರಿಹಾರಣ ಹಣ ಕೇಳಿದ್ರಿ, ಇದು ಯಾವ ಆಧಾರದ ಮೇಲೆ? ಒಟ್ಟಾರೆ ಪ್ರಕರಣದ ಬಗ್ಗೆ ಏನೇಲ್ಲಾ ಮಾಹಿತಿ ಇದೆ ಹೇಳಿ? ಹೀಗೆ ಹಲವಾರು ಪ್ರಶ್ನೆಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾಗಲಿದೆ.
ಗಮನಿಸಿ