ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :ಕುಡಿಯುವ ನೀರಿನ ಯೋಜನೆಗಾಗಿ ಜಾಗ ನೀಡಿದ ರೈತರೊಬ್ಬರಿಗೆ ಪರಿಹಾರ ನೀಡದ ಹಿನ್ನಲೆಯಲ್ಲಿ ಜೆಎಂಎಫ್‌ಸಿ ಆದೇಶದ ಮೆರೆಗೆ ಎಸಿ ಕಚೇರಿ ಪೀಠೋಪಕರಣ ಜಪ್ತು ಮಾಡಲಾಗಿದೆ.
ಅಂಕೋಲಾ ತಾಲೂಕಿನ ಗುಂಡಬಾಳ ಗ್ರಾಮದಲ್ಲಿ ಉದಯ ಬಾಳಗಿ ಎಂಬುವವರು ಗೋಕರ್ಣ ಕುಡಿಯುವ ನೀರಿನ ಯೋಜನೆಗಾಗಿ ನಾಲ್ಕು ಗುಂಟೆ ಜಾಗನೀಡಿದ್ದರು.ಆದರೆ ಸಣ್ಣ ನೀರಾವರಿ ಇಲಾಖೆ ಜಾಗ ನೀಡಿದ ಉದಯ ಬಾಳಗಿ ಅವರಿಗೆ ನೀಡಬೇಕಾದ 10,58,295ನೀಡ ಬೇಕಿತ್ತು.ಇರುವುದಕ್ಕೆ ಕೋರ್ಟ್
ಜಪ್ತಿಗೆ ಆದೇಶಿಸಿದೆ. ಈ ಬಗ್ಗೆ ಉದಯ ಬಾಳಗಿ ಅವರು ಪರಿಹಾರ ಸಿಗದೆ ಇರುವ ಬಗ್ಗೆ ಕುಮಟಾ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕುಮಟಾ ಎಸಿ ಕಚೇರಿಯಲ್ಲಿನ ಪೀಠೋಪಕರಣ ಜಪ್ತಿ ಮಾಡಿ ಪರಿಹಾರ ನೀಡುವಂತೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಇಂದು ನ್ಯಾಯಾಲದ ಅಧಿಕಾರಿಗಳು ಎಸಿ ಕಚೇರಿಗೆ ಭೇಟಿ ನೀಡಿ ಕಂಪ್ಯೂಟರ್,ಝೇರಾಕ್ಷ ಯಂತ್ರ ಸೇರಿದಂತೆ ಪಿಠೋಪಕರಣಗಳನ್ನ ಜಪ್ತುಮಾಡಲಾಗಿದೆ.
ಗಮನಿಸಿ