ಸುದ್ದಿಬಿಂದು ಬ್ಯೂರೋ
ಕಾರವಾರ
: ಮೊಬೈಲ್ ‌ ಚಾರ್ಜರ್‌ನಿಂದ ಶಾಕ್ ತಗುಲಿ 8 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರ ಗ್ರಾಮದಲ್ಲಿ‌ ನಡೆದಿದೆ.

ಸಂತೋಷ ಕಲ್ಗುಟ್ಕರ್ ಹಾಗೂ ಸಂಜನಾ ಅವರ 8 ತಿಂಗಳ ಮಗು ಸಾವನಪ್ಪಿದ್ದಾಗಿದೆ.‌ಮಗುವಿನ ಪೋಷಕರು ಮೊಬೈಲ್ ಚಾರ್ಜ್ ಹಾಕಿ ಆಫ್ ಮಾಡದೇ ಹಾಗೆ ಇಟ್ಟಿದ್ದರು ಎನ್ನಲಾಗಿದೆ. ಆನ್ ಇದ್ದ ಮೊಬೈಲ್ ಚಾರ್ಜರನನ್ನ ಆ ಮಗು ಬಾಯಲ್ಲಿಟ್ಟುಕೊಂಡಿದ್ದು ಇದರಿಂದಾಗಿ ಶಾಕ್‌ ತಗುಲಿ ಮಗು ಸಾವನ್ನಪ್ಪಿದ್ದಾಳೆ.
ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.