ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ನಾಮಧಾರಿ ವಿದ್ಯಾವರ್ಧಕ ಸಂಘ ಬರ್ಗಿ ಇದರ ಆಶ್ರಯದಲ್ಲಿ ಬೆಟ್ಟುಳಿಯಲ್ಲಿ ನಡೆದ 2024 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ. ಕಾರ್ಯಕ್ರಮವನ್ನು ಕುಮಟಾ ಬಿ ಆರ್ ಸಿ ಸಮನ್ವಯಾಧಿಕಾರಿಗಳಾದ ರೇಖಾ ಸಿ ನಾಯ್ಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮಕ್ಕಳು ಜೀವನದಲ್ಲಿ ಮುಂದೆ ಬರಲು ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತವೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಮುಖಾನಂದ ಜಲವಳ್ಳಿ ರವರು ನಾಮಧಾರಿ ಸಮುದಾಯದ ಹಿನ್ನೆಲೆ ,ಅದು ಬೆಳೆದು ಬಂದ ಬಗೆ ಯನ್ನು ವಿವರಿಸಿದರು. ಅತಿಥಿಗಳಾದ ನಿವೃತ್ತ ಮುಖ್ಯಾಧ್ಯಾಪಕರಾದ ಹೊನ್ನಾವರದ ಶ್ರೀಯುತ ನರಸಿಂಹ ಎಸ್ ನಾಯ್ಕ ರವರು ಸಂಘದ ಕಾರ್ಯವನ್ನು ಶ್ಲಾಘಿಸುತ್ತ ಸಂಘದಿಂದ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಮತ್ತು ಸಮಾಜಕ್ಕೆ ತಮ್ಮ ಕಾಣಿಕೆಯನ್ನು ಹಿಂದಿರುಗಿಸಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿದ ನ್ಯಾಯವಾದಿಗಳಾದ ಬಿಡಿ ಶ್ರೀನಾಥ್ ಸಮಾಜದ ಜನಸಂಖ್ಯೆಗೆ ಹೋಲಿಸಿದರೆ ಉನ್ನತ ಹುದ್ದೆಯಲ್ಲಿ ಇರುವವರು ತುಂಬಾ ಕಡಿಮೆ ; ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಮಧಾರಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹನುಮಂತ ಸುಬ್ರಾಯ ನಾಯ್ಕ ವಹಿಸಿದ್ದರು.
ಬೆಟ್ಕುಳಿ ನಾಮಧಾರಿ ಕೂಟದ ಯಜಮಾನರಾದ ರಾಮನಾಥ್ ತಿಮ್ಮಣ್ಣ ನಾಯ್ಕ, ಕಿಮಾನಿ ಕೂಟದ ಯಜಮಾನರಾದ ಕಮಲಾಕರ್ ವಿ ನಾಯ್ಕ , ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಕೆ ಜಿ ನಾಯ್ಕ , ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕರಾದ ಯೋಗೀಶ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಮನಾಥ ತಿಮ್ಮಣ್ಣ ನಾಯ್ಕ ರವರನ್ನು ಸನ್ಮಾನಿಸಲಾಯಿತು.ಪ್ರಾರಂಭದಲ್ಲಿ ಕುಮಾರಿ ಪಾವನಿ ನಾಯ್ಕ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಶಿಕ್ಷಕರಾದ ಉಮೇಶ ನಾಯ್ಕ ಸರ್ವರನ್ನು ಸ್ವಾಗತಿಸಿದರು.ನಿವೃತ್ತ ಮುಖ್ಯ ಶಿಕ್ಷಕರಾದ ಮುಕುಂದ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಚಂದ್ರಶೇಖರ್ ನಾಯ್ಕ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಪತ್ರಕರ್ತರಾದ ಉದಯ ನಾಯ್ಕ ರವರು ವಂದಿಸಿದರು. ಶಿಕ್ಷಕರಾದ ಮೋಹನ ನಾಯ್ಕ ಬರ್ಗಿ ಕಾರ್ಯಕ್ರಮ ನಿರೂಪಣೆ ಮಾಡಿದರು .
ಈ ಕಾರ್ಯಕ್ರಮದಲ್ಲಿ 5 ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಗಮನಿಸಿ