suddibindu.in
Kumta: ಕುಮಟಾ:ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್‌ ಪರ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸೇರಿದಂತೆ ಪ್ರಮುಖ ನಾಯಕರು ನಾಳೆ ಮಂಗಳವಾರ ಕುಮಟಾ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಮತಭೇಟೆಗಾಗಿ ಆಗಮಿಸಲಿದ್ದಾರೆ.

ಡಾ.ಅಂಜಲಿ ನಿಂಬಾಳ್ಕರ್‌ ಪರ ಪ್ರಚಾರಕ್ಕಾಗಿ ನಾಳೆ ಏಪ್ರಿಲ್ 30ರಂದು ಕುಮಟಾ ವಿಧಾನಸಭಾ ಕ್ಷೇತ್ರದ ಕತಗಾಲ, ಅಘನಾಶಿನಿ ಹಾಗೂ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿಮಾನಿ ಗ್ರಾಮಕ್ಕೆ ಮಾಜಿ ಸಿ ಎಂ ವೀರಪ್ಪ ಮೊಯ್ಲಿ ಅವರು ಆಗಮಿಸಲಿದ್ದು,ಪಕ್ಷದ ಅಭ್ಯರ್ಥಿ ಪರ ಬಹಿರಂಗ ಸಭೆ ಮೂಲಕ ಮತಯಾಚನೆ ಮಾಡಲಿದ್ದಾರೆ.

ಇದನ್ನೂ ಓದಿ

ಇನ್ನೂ ಅವರ ಜೊತೆಯಲ್ಲಿ ಜಿಲ್ಲೆಯ ಮಾಜಿ ಸಂಸದೆಯಾಗಿರುವ ಮಾರ್ಗರೇಟ್ ಆಳ್ವ, ಕುಮಟಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ, ನಿವೇದಿತಾ ಆಳ್ವಾ,ಪಕ್ಷದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಭಂಡಾರಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಭುವನ್ ಭಾಗ್ವತ್ ಹಾಗೂ ಆಯಾ ಭಾಗದ ಜಿ.ಪಂ,ತಾ.ಪಂ, ಗ್ರಾ.ಪಂ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎಲ್ಲಾ ಸಮಾವೇಶಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.