suddibindu.in
ಕುಮಟಾ : ದೇಶದಲ್ಲಿನರುವ ಬಡವರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ಜಾತಿ,ಧರ್ಮದವರು ನೆಮ್ಮದಿಯಿಂದ ಇರಬೇಕು ಅಂದರೆ ಮತ್ತೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದು ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ಆರ್‌ ವಿ ದೇಶಪಾಂಡೆ ಹೇಳಿದರು.

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್‌ ಅವರ ಪರ ಪ್ರಚಾರಕ್ಕಾಗಿ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಡಿಗದ್ದೆಯಲ್ಲಿ ನಡೆದ ಸಮಾವೇಶ ಉದ್ದೇಶಿಸಿ ‌ಮಾತನಾಡಿದರು..

ಇದನ್ನೂ ಓದಿ

ದೇಶದಲ್ಲಿ ನರೇಂದ್ರ ಮೋದಿ ಸರಕಾರ ಬಂದು ಹತ್ತು ವರ್ಷದಲ್ಲಿ ಏನು ಕೆಲಸ ಮಾಡಿದೆ ಎನ್ನುವುದು ಜನತೆಗೆ ಗೊತ್ತು, ದೇಶದಲ್ಲಿ ಕಳ್ಳ ಹಣ ಬಹಳ ಆಗಿದೆ, ಶ್ರೀಮಂತರ ಹಣ ಬೇರೆ ಬೇರೆ ದೇಶದಲ್ಲಿ ಎಲ್ಲವನ್ನೂ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ ಜಮ ಮಾಡೋದಾಗಿ ಹೇಳಿದ್ದರು. ಇದುವರೆಗೆ ಯಾರ ಖಾತೆಗಾದ್ರೂ ಹಣ ಬಂದಿದೇಯಾ ಅಂತಾ ಪ್ರಶ್ನೆ ‌ಮಾಡಿದ್ದರು. ಸುಳ್ಳು ಹೇಳಿಕೊಂಡೆ ಕಾಲ‌ ಕಳೆಯುವುದು ಸರಿಯಲ್ಲ.15 ಲಕ್ಷ ಬರತ್ತೆ ಅಂತಾ ಪ್ರತಿಯೊಬ್ಬರೂ 500ರೂಪಾಯಿ ತುಂಬಿ ಖಾತೆ ತೆರೆದ್ರು ಆದರೆ ಈಗ 15ಲಕ್ಷವೂ ಇಲ್ಲ.ಖಾತೆ ತೆರೆಯಲು ತುಂಬಿದ 500 ರೂಪಾಯಿ ಕೂಡ ಇಲ್ಲ ಇದು ಮೋದಿ ಸರಕರದ ಸಾಧನೆ ಅಂತಾ ಲೇವಡ ಮಾಡಿದ್ದರು. ಜನರಿಗೆ ಸುಳ್ಳನ್ನೆ ಹೇಳಿ ಹತ್ತು ವರ್ಷ ದೇಶವನ್ನ ಆಡಳಿದ ಮೋದಿಗೆ ಜನರ ಬಳಿ ಹೋಗಿ ಮತ ಕೇಳುವ ನೈತಿಕತೆ ಇಲ್ಲ ಎಂದರು.

ನಿರುದ್ಯೋಗ್ಯ ಹೆಚ್ಚಾಗಿದೆ. 2ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು ಎಲ್ಲಿ ಹೋಯತ್ತು..20ಕೋಟ ಉದ್ಯೋಗ ಸೃಷ್ಟಿ ಆಗ ಬೇಕಾಗಿತ್ತು.ಎಲ್ಲಿ ಹೋಯತ್ತು. ಮೋದಿ ಹೇಳಿದ್ದಂತೆ ನಡೆದುಕೊಂಡಿಲ್ಲ.ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲ ಪ್ರಯತ್ನಿಸಲಾಗುವುದು. ನಮ್ಮ ಸರಕಾರ ಇರುವಾಗಲೇ ಅತಿಕ್ರಮಣದಾರರನ್ನ ಒಕ್ಕಲ್ಲೆಬಿಸದಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿತ್ತು‌..

ಸಿದ್ದರಾಮಯ್ಯ ನುಡಿದಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ 1ಕೋಟಿ 17ಲಕ್ಷ ಮನೆಗಳಿಗೆ 2 ಸಾವಿರ ಹಣ ಕೊಡಲಾಗಿದೆ. 11ಸಾವಿರ ಕೋಟಿ ಹಣವನ್ನ ಮಹಿಳೆಯರಿಗೆ ನೀಡಲಾಗಿದೆ. ನಮ್ಮ ಸರಕಾರ ಬಂದ್ರೆ ರೈತರ ಎಲ್ಲಾ ಸಾಲ ಮನ್ನಾಮಾಡತ್ತೆವೆ‌ ಎಂದರು..

ಸಮಾವೇಶದಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಭೂವನ್ ಭಾಗ್ವತ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ್ ನಾಯ್ಕ, ಭಾಸ್ಕರ್ ಪಟಗಾರ, ನಾಗೇಶ ನಾಯ್ಕ ಕಲಭಾಗ, ಗೋಪಾಲ ಕೃಷ್ಣ ನಾಯಕ, ಹೊನ್ನಪ್ಪ ನಾಯಕ, ಶಿವರಾಮ ಹರಿಕಾಂತ, ಬರ್ಗಿ ಘಟಕಾಧ್ಯಕ್ಷ ಹುಸೇನ್, ಸೇರಿದಂತೆ ಮೊದಲಾದ