suddibindu.in
ಕುಮಟಾ : ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ,ಆದರೆ ಬಿಜೆಪಿಯ ಒಳ ಜನಗಳದಿಂದಾಗಿ ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ..
ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಆದರೆ ಅನಂತಕುಮಾರ ಅವರನ್ನ ಸೈಡ್ ಲೈನ್ ಮಾಡಿರುವುದು ಮನೆ ಒಂದು ಮೂರು ಬಾಗಿಲು ಎನ್ನುವಂತಾಗಿದೆ. ಅಭ್ಯರ್ಥಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕ್ಷಣಕ್ಕೊಂದರಂತೆ ಪೊಸ್ಟ್ ಮಾಡುವ ಮೂಲಕ ಅಭ್ಯರ್ಥಿ ಕಾಲೆಳೆಯುವ ಕೆಲಸಗಳು ಜೋರಾಗಿ ಸಾಗಿದೆ. ಈ ಮೊದಲು ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಎದುರಾಳಿಗಳ ವಿರುದ್ಧ ಪೊಸ್ಟ್ ಮಾಡಲಾಗುತಿತ್ತು.ಆದರೆ ಅವೆಲ್ಲವೂ ಈ ಬಾರಿ ಉಲ್ಟಾ ಆಗಿದೆ.
ಇದನ್ನೂ ಓದಿ
- ಮುಡಾ ಹಗರಣ :ಲೋಕಾಯುಕ್ತ ತನಿಖೆಗೆ ಹಾಜರಾದ ಸಿಎಂ ಸಿದ್ದರಾಮಯ್ಯ
- ಮನೆ ಬೀಗ ಮುರಿದು 40ಗ್ರಾಂ ಚಿನ್ನಾಭರಣ ಕಳ್ಳತನ
- ಅಪ್ರಾಪ್ತ ಬಾಲಕಿಗೆ ಮುತ್ತು ಕೊಟ್ಟ ಆರೋಪದಲ್ಲಿ ಹೆಡ್ಕಾನ್ಸಟೇಬಲ್ ಅಮಾನತ್ತು
ಬಿಜೆಪಿ ಅಭ್ಯರ್ಥಿ ತಮ್ಮ ರಾಜಕೀಯದಲ್ಲಿ ಯಾವೆಲ್ಲಾ ತಪ್ಪುಗಳನ್ನ ಮಾಡಿದ್ದಾರೆ ಎನ್ನುವುದನ್ನ ಪೋಸ್ಟ್ ಮಾಡುವ ಮೂಲಕ ಜನರಿಗೆ ಆ ತಪ್ಪುಗಳನ್ನ ನೆನಪಿಸಿಕೊಂಡುತ್ತಿದ್ದಾರೆ. ಇದರಿಂದಾಗಿ ಅಭ್ಯರ್ಥಿಗೆ ಒಂದು ರೀತಿಯಲ್ಲಿ ಇರಿಸು-ಮುರಿಸು ಆಗುವಂತಾಗಿದೆ. ತಾವೆ ಸಚಿವರು ಆಗಬೇಕು ಎನ್ನುವ ಕಾರಣಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಬಿಜೆಪಿ ಅಭ್ಯರ್ಥಿಗಳನ್ನ ಇವರೆ ಸೋಲಿಸಲು ರಣತಂತ್ರ ರೂಪಿಸಿದ್ದರು ಎನ್ನುವ ಪೋಸ್ಟ್ ಕೂಡ ಭಾರೀ ಸದ್ದು ಮಾಡುತ್ತಿದೆ.ಅಷ್ಟೆ ಅಲ್ಲದೆ ಮೊದಲಿನಿಂದಲ್ಲೂ ಇವರು ಹಿಂದೂಳಿದ ವರ್ಗದವರನ್ನ ಕಡೆಗಣಿಸುತ್ತಲೆ ಬಂದಿದ್ದಾರೆ ಎನ್ನುವ ಪೊಸ್ಟ್ ಹಿಂದೂಳಿದ ವರ್ಗದವರ ಮನಸ್ಸಿಗೆ ತಟ್ಟುವಂತಾಗಿದೆ. ಇದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಹಿಂದೂಳಿದವರು ಒಗ್ಗೂಡಿಸುವಂತೆ ಮಾಡಿದೆ ಎಂದು ರಾಜಕೀಯ ವಿಶ್ಲೇಷಕರೆ ಹೇಳುವಂತಾಗಿದೆ.
ಅನಂತಕುಮಾರ ಹೆಗಡೆ ಉಚ್ಚಾಟನೆ ಸಾಧ್ಯತೆ..
ಕಳೆದ ಆರು ಭಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಇದಾದ ಬಳಿಕ ಅನಂತಕುಮಾರ ಪಕ್ಷದ ಚುಟುವಟಿಕೆಯಿಂದ ದೂರ ಉಳಿದಿದ್ದಾರೆ.ಅವರು ಪರ-ವಿರೋಧ ಮಾಡದೆ ಮೌನವಹಿಸಿದ್ದರು ಸಹ ಅವರ ಮೌನ ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಉಂಟಾಗುವಂತೆ ಮಾಡಿದೆ ಎನ್ನಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು ಮುಂದಿನ ದಿನದಲ್ಲಿ ಮೂರು ದಶಕಗಳ ಕಾಲ ಸಂಸದರಾಗಿದ್ದ ಅನಂತಕುಮಾರ ಹೆಗಡೆ ಅವರನ್ನ ಉಚ್ಚಾಟನೆ ಮಾಡಲು ಮುಂದಾಗಿದ್ದು, ಈ ವಿಚಾರ ಈಗಾಗಲೇ ಅನಂತಕುಮಾರ ಅಭಿಮಾನಿಗಳ ಕಿವಿಗೂ ಮುಟ್ಟಿದ್ದು, ಎಲ್ಲರೂ ಒಳಗೊಳಗೆ ಕೆಂಡಾಮಂಡಲರಾಗಿದ್ದಾರೆ., ಮೂರು ದಶಕದಿಂದ ಜಿಲ್ಲೆಯಲ್ಲಿ ಬಿಜೆಪಿಯನ್ಬ ಕಟ್ಟಿ ಬೆಳೆಸಿದ ಅನಂತಕುಮಾರ ಅವರನ್ನ ಉಚ್ಚಾಟನೆಗೆ ಮುಂದಾಗಿರುವುದು ಅನಂತಕುಮಾರ ಹೆಗಡೆ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.