ಸುದ್ದಿಬಿಂದು ಬ್ಯೂರೋ
ಬೆಂಗಳೂರು :
ಬಿಜೆಪಿ ಸರಕಾರದಲ್ಲಿ‌‌ ನಡೆದಿರುವ ಹಗರಣವನ್ನ ಹೊರ ‌ತರುವುದಕ್ಕೆ ಕಾಂಗ್ರೆಸ್ ಸರಕಾರ ‌ಇದೀಗ ಮುಂದಾಗಿದ್ದು, ಪ್ರಕರಣದ ತನಿಖೆಗಾಗಿ ಎಸ್ ಐ ಟಿ ರಚನೆ ಮಾಡಲು ಕಾಂಗ್ರೆಸ್ ‌ಮುಂದಾಗಿದೆ.

ಈ ಬಗ್ಗೆ ಇಂದು ನಡೆದ ಕ್ಯಾಬಿನೇಟ್ ನಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಪಿಎಸ್‌ಐ ನೇಮಕಾತಿ ಅಕ್ರಮ ಸೇರಿದಂತೆ ವಿವಿಧ ನೇಮಕಾತಿ ಅಕ್ರಮಗಳ ತನಿಖೆಗೆ ಎಸ್ ಐ ಟಿ ರಚನೆ ಮಾಡಲು ಚರ್ಚೆ ನಡೆಸಿದೆ. ಹಿಂದೆ ನಾವು ಹಗರಣಗಳ ಬಗ್ಗೆ ಧ್ವನಿ ಎತ್ತಿದ್ದೇವೆ, ಈಗ ತನಿಖೆ ಸೂಕ್ತವಾಗಿ ಮಾಡದಿದ್ದರೆ ಹೊಂದಾಣಿಕೆ ರಾಜಕಾರಣ ಎನ್ನುತ್ತಾರೆ,

ಹೀಗಾಗಿ ತಕ್ಷಣವೇ ತನಿಖೆಗೆ ವಿಶೇಷ ತಂಡ ರಚಿಸಿ, ತನಿಖೆ ನಡೆಸುವಂತೆ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಈ ಸಂಬಂಧ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಸಚಿವ ಕೃಷ್ಣ ಭೈರೇಗೌಡ ಪ್ರಸ್ತಾಪ ಮಾಡಿದ್ದು, ಇವರಿಬ್ಬರ ಮಾತಿಗೆ ಸಚಿವ ದಿನೇಶ್ ಗುಂಡೂರಾವ್ ದನಿಗೂಡಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮುಂದಿನ ಕ್ಯಾಬಿನೇಟ್ ನಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಎಂದು ತಿಳಿದುಬಂದಿದೆ. ಸಿಎಂ ತಿಳಿಸಿದ್ದಾರೆ