ಸುದ್ದಿಬಿಂದು ಬ್ಯೂರೋ
ಮಂಗಳೂರು : ಗಣಿತದ ಪರೀಕ್ಷೆಯಲ್ಲಿ ಉತ್ತರ ಸರಿ ಬಿಡಿಸಿದ್ದರೂ ಸಹ, ತನಗೆ ಬೇಕೆಂತಲೇ ಶಿಕ್ಷಕಿ(teacher) ಕಡಿಮೆ ಅಂಕ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಇದನ್ನೇ ದೊಡ್ಡದಾಗಿ ಮನಸ್ಸಿಗೆ ಹಚ್ಚಿಕೊಂಡು ಸಿಟ್ಟಿಗೆದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಸಹ ಪಾಟಿಯ ಜೊತೆ ಸೇರಿ ಶಿಕ್ಷಕಿಯ ನೀರು ಬಾಟಲಿಗೆ ಅವಧಿ ಮೀರಿದ ಮಾತ್ರೆಯನ್ನು (students who put pill in water bottle) ಹಾಕಿ, ಶಿಕ್ಷಕಿ ಆಸ್ಪತ್ರೆಗೆ ಸೇರಿರುವ ಘಟನೆ ದಕ್ಷಿಣ ಕನ್ನಡ( South Kannada) ಜಿಲ್ಲೆಯ ಉಳ್ಳಾಲದ (Ullala) ಖಾಸಗಿ ಶಾಲೆಯಲ್ಲಿ(Private School)ನಡೆದಿದೆ.
ಶಾಲೆಯಲ್ಲಿ ಇತ್ತೀಚೆಗೆ ಪರೀಕ್ಷೆ ನಡೆದಿತ್ತು. ಪರೀಕ್ಷೆಯ ಗಣಿತ ವಿಷಯದಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕಿ ಒಂದು ಅಂಕ ಕಡಿಮೆ ಕೊಟ್ಟಿದ್ದರು. ಇದರಿಂದ ವಿದ್ಯಾರ್ಥಿನಿ ಕುಪಿತಗೊಂಡಿದ್ದಳು. ಟೀಚರ್ ಸರಿ ಉತ್ತರಕ್ಕೆ ಮಾರ್ಕ್ಸ್ ನೀಡಿಲ್ಲ ಎಂದು ವಿದ್ಯಾರ್ಥಿನಿ ಶಿಕ್ಷಕಿಯ ಮೇಲೆ ಕೋಪದಲ್ಲಿದ್ದಳು. ಇದೇ ಸಿಟ್ಟಿನಿಂದ ಶಿಕ್ಷಕಿಗೆ ಏನಾದರೂ ಮಾಡಬೇಕು ಎಂದು ಇನ್ನೊಬ್ಬ ವಿದ್ಯಾರ್ಥಿನಿಯ ಜೊತೆ ಸೇರಿ ಶಿಕ್ಷಕಿಯ ನೀರಿನ ಬಾಟ್ಲಿಗೆ ಅವಧಿ ಮುಗಿದ ಮಾತ್ರೆಗಳನ್ನು ಹಾಕಿದ್ದಾರೆ.
ವಿದ್ಯಾರ್ಥಿನಿಯರಿಬ್ಬರು ತಮ್ಮ ವಾಟರ್ ಬಾಟಲ್ಗೆ ಅವಧಿ ಮೀರಿದ ಮಾತ್ರೆ (tablet)ಹಾಕಿದ್ದು ತಿಳಿಯದೇ ಆ ನೀರನ್ನು ಕುಡಿದ ಶಿಕ್ಷಕಿ ಮತ್ತು ಇನ್ನೊಂದು ಶಿಕ್ಷಕಿ (teacher)ಸೇರಿದಂತೆ ಇಬ್ಬರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಬೇಕಾದ ಪರಿಸ್ಥಿತಿ ಉಂಟಾಯಿತು.
ನೀರನ್ನು ಕುಡಿದು ಇಬ್ಬರು ಶಿಕ್ಷಕಿಯರು ಅಶ್ವತ್ಥಗೊಂಡು ಆಸ್ಪತ್ರೆಗೆ ಸೇರಿದ ನಂತರ ನೀರಿನ ಬಾಟಲನ್ನು ಸೂಕ್ಷ್ಮವಾಗಿ ನೋಡಿದಾಗ ಬಾಟಲಿಯಲ್ಲಿ ಗುಳಿಗೆಯ ಹುಡಿ ಇರುವುದು ಪತ್ತೆಯಾಗಿತ್ತು. ಶಾಲೆಯ ಆಡಳಿತ ಮಂಡಳಿ ಈ ಬಗ್ಗೆ ಮತ್ತಷ್ಟು ತನಿಖೆಗೆ ಇಳಿದು ಶಾಲೆಯ ಸಿಸಿಟಿವಿ(CCTV)ಪರೀಕ್ಷಿಸಿದಾಗ ವಿದ್ಯಾರ್ಥಿನೀಯರಿಬ್ಬರ ಈ ಕೆಲಸ ಬಯಲಾಗಿತ್ತು.
ಸೂಕ್ಷ್ಮ ಮನಸ್ಸಿನ ಮಕ್ಕಳನ್ನು ಶಾಲೆಯ ಶಿಕ್ಷಕರು,ಆಡಳಿತ ಮಂಡಳಿಗಳು ಹಾಗೂ ಹೆತ್ತವರು ಇಂತಹ ಸಂದರ್ಭದಲ್ಲಿ ಅವರಿಗೆ ಸರಿಯಾಗಿ ತಿಳಿ ಹೇಳಿ ಸರಿದಾರಿಗೆ ತರುವ ಕೆಲಸ ಈ ಎಲ್ಲರೂ ಮಾಡಬೇಕಾಗಿದೆ. ಇಲ್ಲವಾದರೆ, ಮಕ್ಕಳು ಮತ್ತಷ್ಟು ಮನಸ್ಸಿಗೆ ಹಚ್ಚಿಕೊಂಡು ತಾವೇ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.