ಸುದ್ದಿಬಿಂದು ಬ್ಯೂರೋ
ವಿಜಯಪುರ : ಬಟ್ಟೆ(garment)ವ್ಯಾಪಾರಿ ಒಬ್ಬರಿಂದ ಆನ್‌ಲೈನ್‌ನಲ್ಲಿ(online fraud)ಹಣ ಹೂಡಿಕೆ ಮಾಡಿಸಿಕೊಂಡು ಲಕ್ಷಾಂತರ ನಗದು ವಂಚಿಸಿದ ನೈಜಿರಿಯನ್(nigerian)ಮೂಲದ ವ್ಯಕ್ತಿ ಸೇರಿದಂತೆ ನಾಲ್ವರು ಆನ್‌ಲೈನ್ ಕದೀಮರನ್ನು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ಆರೋಪಿಗಳಿಂದ ಮೊಬೈಲ್ ಹಾಗೂ ಸಿಮ್ ಕಾರ್ಡ್‌ಗಳನ್ನು (sim card)ವಶಕ್ಕೆ ಪಡೆಯಲಾಗಿದೆ. ಧಾರವಾಡದ ಶಮಸುದ್ದಿನ್ ಸಂಗ್ರೇಶಕೊಪ್ಪ, ಫಯಾಜ್‌ಅಹ್ಮದ್ ತಡಕೋಡ, ರುಬಿನ್ ಬಾಳೆ ಹಾಗೂ ಕೀನ್ಯಾ ದೇಶದ(Kenya Country)ಕ್ರಿಸ್ ಅನ್ಯುಗಾಬಾರಕೆ ಥಾಮಸ್ ಒಂಬೊಗಾ ಬಂಧಿತ ಆರೋಪಿಗಳಾಗಿದ್ದಾರೆ.

ವಿಜಯಪುರದ ಬಟ್ಟೆ ವರ್ತಕ ವಿಶಾಲ ಜೈನ್ ಎಂಬುವರು ಈ ಆರೋಪಿಗಳಿರುವ ವಾಟ್ಸ್ ಆ್ಯಪ್ ಗ್ರುಪ್‌ನಲ್ಲಿ ಸೇರ್ಪಡೆಯಾಗಿದ್ದರು. ಕೆಲ ದಿನಗಳ ಕಾಲ ಸೂಕ್ಷ್ಮವಾಗಿ ಗಮನಿಸಿದ ಜೈನ್ ಕೊನೆಗೆ ತಾನೂ 59 ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ(Online)ಹೂಡಿಕೆ ಮಾಡಿದರು. ಇದೀಗ್ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ವಿಜಯಪುರ ಸಿಇಎನ್ ಪೊಲೀಸ್(CEN Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.