ಸುದ್ದಿಬಿಂದು ಬ್ಯೂರೋ
ಕಾರವಾರ: ಅತೀವೇಗವಾಗಿ ಚಲಾಯಿಸಕೊಂಡು ಬಂದ ಕಾರು ಚಾಲಕ ಎದುರಿಗೆ ಹೋಗುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದ‌ ಪರಿಣಾಮ‌ ಬೈಕ್ ಸವಾರ ನೋರ್ವ ಸ್ಥಳದಲ್ಲೆ ಮೃತಪಟ್ಟರುವ ಘಟನೆ ಉತ್ತರಕನ್ನಡ (Uttarkannada)ಜಿಲ್ಲೆಯ ಕಾರವಾರದ ಸದಾಶಿವಘಡದಲ್ಲಿ ನಡೆದಿದೆ.

ಕಾರವಾರ(karwar)ತಾಲೂಕಿನ‌ ಸದಾಶಿವಘಡದ ಹೆದ್ದಾರಿ 66ರಲ್ಲಿ ಅಪಘಾತ ನಡೆದಿದೆ.ಬೈಕ್ ಮತ್ತು ಕಾರು ಎರಡು ಕೂಡ ಗೋವಾ(goa)ಕಡೆಯಿಂದ ಕಾರವಾರ ಕಡೆಗೆ ಬರುತ್ತಿದ್ದಾಗ ಕಾರು ಚಾಲಕ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ‌ ಸಾಕಷ್ಟು ದೂರದಲ್ಲಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾರು ಚಾಲಕನ ನಿರ್ಲಕ್ಷ್ಯತನದಿಂದಲ್ಲೆ‌ ಈ ಅಪಘಾತ ನಡೆದಿದೆ ಎನ್ನಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ‌ ನಡೆಸಿದ್ದಾರೆ.ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.