ಸುದ್ದಿಬಿಂದು ಬ್ಯೂರೋ
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಾರಿಗನೂರು ಎಂಬಲ ಆಟೊಗೆ ಟ್ರಕ್ ಡಿಕ್ಕಿ ಹೊಡೆದು, ಆಟೊ ಸೇತುವೆಯ ಕೆಳಗೆ ಬಿದ್ದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.‘ಆಟೊದಲ್ಲಿದ್ದ ಎಲ್ಲಾ ಏಳು ಮಂದಿ ಮೃತಪಟ್ಟಿದ್ದಾರೆ. ಉಕ್ಕಿನ ಸರಳು ಸಾಗಿಸುವ ಖಾಲಿ ಟ್ರಕ್ ಆಟೊಗೆ ಡಿಕ್ಕಿ ಹೊಡೆದು ಈ ದುರಂತ ಸಂಬವಿಸಿದೆ,
ಮೃತರು ಬಳ್ಳಾರಿಯವರು..?
ಹೊಸಪೇಟೆ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರು ಬಳ್ಳಾರಿಯವರು ಎಂದು ಹೇಳಲಾಗುತ್ತಿದೆ.’ಟ್ರಕ್ ಎರಡು ರಿಕ್ಷಾಗಳಿಗೆ ಡಿಕ್ಕಿ ಹೊಡೆದಿದ್ದು,. ಎರಡೂ ರಿಕ್ಷಾಗಳಲ್ಲಿ ಒಟ್ಟು 19 ಮಂದಿ ಇದ್ದರು. ಒಂದು ರಿಕ್ಷಾದಲ್ಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇತರ 12 ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಬೀರವಾಗಿದೆ. ಅವರನ್ನು ಬಳ್ಳಾರಿಗೆ ಕಳುಹಿಸಲಾಗಿದೆ. ಉಳಿದವರು ಹೊಸಪೇಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರ ಗುರುತು ಪತ್ತೆ ಹಚ್ಚಲು ಆಧಾರ್ ಮತ್ತಿತರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.