ಸುದ್ದಿಬಿಂದು ಬ್ಯೂರೋ
ಕುಮಟಾ : ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ‌ಒಂದು ಹೆದ್ದಾರಿ ಬಿಟ್ಟು ಡಿವೈಡರ್ ಏರಿ ಅಪಘಾತವಾಗಿರುವ ಘಟನೆ ಕುಮಟಾ ಸಮೀಪದ ಹಂದಿಗೋಣ ರಾತ್ರಿ ವೇಳೆ ನಡೆದಿದೆ.

ಅಂಕೋಲಾ‌ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಲಿ ಗ್ಯಾಸ್ ಟ್ಯಾಂಕರ್ ಇದಾಗಿದ್ದು, ರಾತ್ರಿ ಸಮಯದಲ್ಲಿ ಕುಮಟಾ ತಾಲೂಕಿನ ಹಂದಿಗೋಣ ಸಮೀಪ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿ ಮಧ್ಯದಲ್ಲಿ ಡಿವೈಡರ್ ಹಾಕಲಾಗಿದೆ. ಆದರೆ ಚಾಲಕನ ನಿರ್ಲಕ್ಷ್ಯದಿಂದಾಗಿ ಗ್ಯಾಸ್ ಟ್ಯಾಂಕರ್ ಡಿವೈಡರ್ ಹತ್ತಿದೆ.

ಆದರೆ ಘಟನೆ ಸುದ್ದಿ ತಿಳಿದ ಕುಮಟಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದ ಗ್ಯಾಸ್ ಟ್ಯಾಂಕರ್ ನ್ನ ಈಗ ಹೊಳೆಗದ್ದೆ ಟೋಲ್ ಗೇಟ್ ಬಳಿ ಇಡಲಾಗಿದೆ.