ಸುದ್ದಿಬಿಂದು ಬ್ಯೂರೋ
ಕಾರವಾರ : ಮಾಜಾಳಿಯ ಚೆಕ್ ಪೊಸ್ಟ್ ಬಳಿ ಸ್ಪಿರಿಟ್‌ ಟ್ಯಾಂಕರ್ ವಶಕ್ಕೆ ಪಡೆದಿರುವ ಬಗ್ಗೆ ಶಾಸಕರು ದೊಡ್ಡ ರಂಪಾಟ ಮಾಡಿದ್ದಾರೆ. ಇದರ ಹಿಂದೆ ಏನಿದೆ ಎನ್ನುವುದು ಗೋತ್ತಾಗಬೇಕಿದೆ. ಈ ಬಗ್ಗೆ ತನಿಖೆ ಆಗಬೇಕು‌.ಸತೀಶ್ ಸೈಲ್ ಈ ಸ್ಪಿರಿಟ್‌ ವ್ಯವಹಾರದಲ್ಲಿ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಎನ್ನುವುದು ಗೊತ್ತಾಗಬೇಕಿದೆ ಎಂದು ಕಾರವಾರ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದ್ದಾರೆ
.

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೂಪಾಲಿ ನಾಯ್ಕ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಗೂಂಡಾಗಿರಿ ನಡೆಯುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಮಾಜಾಳಿ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡ ಟ್ಯಾಂಕರ್ ಬಿಡುಗಡೆ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ.

ಚೆಕ್ ಪೊಸ್ಟ್ ಗೆ ತೆರಳಿ ಶಾಸಕರು ಗೂಂಡಾಗಿರಿ ಮಾಡಿದ್ದಾರೆ.ಒಂದಕಡೆ ಸ್ಪಿರಿಟ್‌ ಟ್ಯಾಂಕರ್ ಬಿಡುಗಡೆ ಮಾಡುವಂತೆ ಹೇಳುವುದು ಹಾಗೂ ಪ್ರಕರಣ ದಾಖಲಿಸುವಂತೆ ಹೇಳುವುದು ಎಷ್ಟು ಸರಿ.ಶಾಸಕರು ಗಲಾಟೆ ಸಮಯಲ್ಲಿ ಆ ಅಧಿಕಾರಿ ಮೊಬೈಲ್ ವಿಡಿಯೋ ಮಾಡಿಕೊಂಡಾಗ ಶಾಸಕರು ಯಾಕೆ ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಕಾರವಾರದಲ್ಲಿ ಗೂಂಡಾಗಿರಿ ನಡೆದಿರುವುದನ್ನ ನೋಡಿದ್ದೇವೆ ಆದರೆ ನಾನು ಶಾಸಕಿ ಆದ ಬಳಿಕ ಇದು ಇರಲಿಲ್ಲ. ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಶಾಸಕರು ಮಾಡಿರುವ ವರ್ಥನೆಯನ್ನ ನೋಡಿದ್ದರೆ ಮತ್ತೆ ಕಾರವಾರದಲ್ಲಿ ಆ ಹಿಂದಿನ ಗೂಂಡಾಗಿರಿ ಮರುಕಳಿಸುವಂತೆ ಕಾಣುತ್ತಿದೆ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಆತಂಕ ಹೊರಹಾಕಿದ್ದು, ಕಾರವಾರದಲ್ಲಿ ಇಂತಹ ಘಟನೆ ಮರುಕಳಿಸಬಾರದು ಎಂದು ಈ ಮೂಲಕ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸರಕಾರಿ ಅಧಿಕಾರಿ ಒಬ್ಬರು ಒಳ್ಳೆ ಕೆಲಸ ಮಾಡುವಾಗ ತಡೆಯುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ‌ಸರಕಾರ ಅಧಿಕಾರ ಬಂದ ಬಳಿಕ ಕಾರವಾರ ಸೇರಿದಂತೆ‌ ರಾಜ್ಯಾದ್ಯಂತ ರೌಡಿಸಂ ನಡಿತ್ತಾ ಇದೆ. ಈ‌ ಸರಕಾರ ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದರು.