suddibindu.in
Karwar:ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರಣಕಣ‌ಜೋರಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಡಾ.ಅಂಜಲಿ ನಿಂಬಾಳ್ಕರ್‌ ಇಂದು ಕೇಸರಿ ಸೀರೆ,ಕೇಸರಿ ಪೇಟಾ ತೊಟ್ಟು ನಾಮಪತ್ರ ಸಲ್ಲಿಸಲು ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕಾರವಾರ ನಗರದ ಸಿದ್ದಿವಿನಾಯಕ ದೇವಸ್ಥಾನಕ್ಕೆ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ದೇವಸ್ಥಾನದಲ್ಲಿ ತಮ್ಮ ನಾಮಪತ್ರವನ್ನ ದೇವರ ಎದುರು ಇಟ್ಟು ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಜಿಲ್ಲೆಯ ಶಾಸಕರಾದ ಆರ್ ವಿ ದೇಶಪಾಂಡೆ, ಭೀಮಣ್ಣ ನಾಯ್ಕ, ಸತೀಶ ಸೈಲ್ ಸಾಥ್ ನೀಡಿದ್ದರು..

ನಾಮಪತ್ರ ಸಲ್ಲಿಕೆ ಮೆರವಣಿಗಾಗಿ ಉತ್ತರಕನ್ನಡ ಲೋಕಸಭಾ ಕ್ಷೇತ್ತದ ಕಿತ್ತೂರು ಖಾನಾಪುರ ಭಾಗದಿಂದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಜನ ಸಾಗರ ಹರಿದು ಬಂದಿರುವುದರಿಂದ ನಗರದ ಎಲ್ಲಾ ರಸ್ತೆಗಳು ಜನದಟ್ಟಣೆಗಳಿಂದ ತುಂಬಿತ್ತು..