ಸುದ್ದಿಬಿಂದು ಬ್ಯೂರೋ
ಕಾರವಾರ : ಮಾಜಾಳಿಯ ಚೆಕ್ ಪೊಸ್ಟ್ ಬಳಿ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಟ್ಯಾಂಕರ್ (Spirit, Tanker) ನಲ್ಲಿ ಇರುವುದು ಮದ್ಯ ತಯಾರಿಕೆಗೆ ಬಳಸಲಾಗುವ ಸ್ಪಿರಿಟ್ ಎನ್ನುವುದು ಈಗ ಗೊತ್ತಾಗಿದೆ. ಈ ಸ್ಪಿರಿಟ್ ಹಗರಣಲ್ಲಿ ಶಾಸಕರು ಶಾಮೀಲಾಗಿದ್ದಾರೆ. ಹೀಗಾಗಿ ಶಾಸಕರು ತಮ್ಮ ಶಾಸಕ(MLA) ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದ್ದಾರೆ.
ಕಾರವಾರದ(karwar)ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ,ಶಾಸಕರಾಗಿರುವ ಸತೀಶ ಸೈಲ್ ಅವರಿಗೆ ಆ ಟ್ಯಾಂಕರ್ ನಲ್ಲಿ ಇದಿದ್ದು ಮದ್ಯಕ್ಕೆ ಬಳಸಲಾಗುವ ಸ್ಪಿರಿಟ್ ಅಂತಾ ಗೊತ್ತಿದ್ದರೂ ಕೂಡ ಅವರು ಆ ಟ್ಯಾಂಕರ್ ಬಿಡುಗಡೆ ಮಾಡಬೇಕು ಎನ್ನುವ ಉದ್ದೇಶದಿಂದ ಮಾಜಾಳಿ ಚೆಕ್ ಪೊಸ್ಟ್ ಗೆ ತೆರಳಿ ಅಬಕಾರಿ ಇಲಾಖೆಯ ಅಧಿಕಾರಿ ವಿರುದ್ಧ ದಬ್ಬಾಳಿಕೆ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಶಾಸಕರು ಹಾಗೂ ಅವರ ಆಪ್ತರಾಗಿರುವ ಶಂಭು ಶೆಟ್ಟಿ ಸೇರಿದಂತೆ ಶಾಸಕ ಟೀಂ ಇದರಲ್ಲಿ ಶಾಮೀಲಾಗಿ. ಸ್ಪಿರಿಟ್ ತುಂಬಿದ ಟ್ಯಾಂಕರ್ ನ್ನ ಗೋವಾಕ್ಕೆ ಪಾರು ಮಾಡಲು ಬಹಳ ತರಾತುರಿಯಲ್ಲಿ. ಅಧಿಕಾರಿ ವಿರುದ್ಧ ದಬ್ಬಾಳಿಕೆ ಮಾಡಿದ್ದಾರೆ.ಒಬ್ಬ ಜನಪ್ರತಿನಿಧಿಯಾಗಿ ಜನರ ಸೇವೆ ಮಾಡುವುದನ್ನ ಬಿಟ್ಟು, ಎಲ್ಲಾ ಮದ್ಯದ ಅಂಗಡಿಗಳಿಗೆ ಬೆಂಬಲಿಸುವುದು, ಅಕ್ರಮ ಸ್ಪಿರಿಟ್ ದಂಧೆ ಸಾಗಾಟಗಾರರಿಗೆ ಬೆಂಬಲಿಸುವುದು, ದಬ್ಬಾಳಿಕೆ ಮಾಡುವುದು, ಗೂಂಡಾಗಿರಿ ಮಾಡುವುದನ್ನ ಇಲ್ಲಿನ ಶಾಸಕರು ಮಾಡುತ್ತಿದ್ದಾರೆ.
ಅವರದ್ದೇ ಸರಕಾರ ಇರುವಾಗ ಅವರದೆ ಅಧಿಕಾರಿಗಳಿಗೆ ಟ್ಯಾಂಕರ್ ಬಿಡು ಇಲ್ಲ ಕಂಪ್ಲೇಟ್ ಮಾಡಿ ಎಂದು ಯಾಕೆ ಹೇಳಬೇಕಿತ್ತು. ಅದು ಅಲ್ಲದೆ ಶಾಸಕರು ಅಲ್ಲಿಗಡ ಹೋಗಿ ಯಾಕೆ ತರಾಟೆಗೆ ತೆಗೆದುಕೊಳ್ಳಬೇಕಿತ್ತು.ಆ ಟ್ಯಾಂಕರಿಗೆ ಏನು ಲಿಂಕ್ ಇದೆ.ಅದನ್ನ ತ್ವರಿತವಾಗಿ ಬಹಿರಂಗ ಮಾಡಬೇಕು.ಈ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಬೇಕು ಎಂದು ಹೇಳಿದ್ದರು. ಶಾಸಕ ಈ ಕೃತ್ಯದ ಬಗ್ಗೆ ನಾವು ಮುಂದಿನ ದಿನದಲ್ಲಿ ಹೋರಾಟ ಮಾಡುತ್ತೆವೆ. ಮತ್ತು ಅವರ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಒತ್ತಾಯಿಸಿದ್ದಾರೆ.