ದೆಹಲಿ : ಪತ್ರಕರ್ತರ ಮೇಲೆ ಹಲ್ಲೆ, ಅವಮಾನ ಮಾಡುವುದು ಅಥವಾ ಥಳಿಸಿದರೆ, ಹಾಗೂ ಬೆದರಿಕೆಯೊಡ್ಡಿದ್ದಲ್ಲಿ ಯಾರೇ ಆಗಲಿ ಅಂತವರ ಮೇಲೆ ಐದು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ, 50 ಸಾವಿರ ರೂಗಳು ದಂಡ ಎಂದು ಪ್ರಕಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವವಾದ ತೀರ್ಪು ನೀಡಿ ಆದೇಶಿಸಿದೆ.
ಪತ್ರಕರ್ತರ ಮೇಲೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡುವುದು, ಹಲ್ಲೆ ಮಾಡುವುದು ನಡೆಯುತ್ತಿದ್ದು ಅಂತವರ ವಿರುದ್ಧ ನೇರವಾಗಿ ಐದು ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ, 50 ಸಾವಿರ ದಂಡ ವಿಧಿಸಲು ಆದೇಶಿಸಲಾಗಿದೆ.
ಪತ್ರಕರ್ತರ ಮೇಲಿನ ಈಒಂದು ಆದೇಶವು ಅತ್ಯಂತ ಶ್ರೇಷ್ಠವಾಗಿದ್ದು ಇದರ ಜೊತೆಗೆ ಪತ್ರಕರ್ತರಿಗೆ ಬೇಕಾದ ಸಹಕಾರವನ್ನು ಸರ್ಕಾರಗಳು ನೀಡಬೇಕೆಂದು ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಸಂಪಾದಕರ ಸಂಘದ ರಾಜ್ಯ ನಿರ್ದೇಶಕರಾದ ಎಸ್.ಟಿ.ನವೀನ್ ಕುಮಾರ್, ತಿಳಿಸಿದ್ದಾರೆ.
ಕೋರ್ಟ್ ತೀರ್ಪು ಸ್ವಾಗತರ್ಹ
ಪತ್ರಕರ್ತರ ಮೇಲಿನ ಈ ಒಂದು ಆದೇಶವು ಅತ್ಯಂತ ಶ್ರೇಷ್ಠವಾಗಿದ್ದು,ಇದರ ಜೊತೆಗೆ ಪತ್ರಕರ್ತರಿಗೆ ಬೇಕಾದ ಆರ್ಥಿಕ ಮತ್ತು ಮೂಲ ಭೂತ ಸಹಕಾರವನ್ನು ಸರ್ಕಾರಗಳು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಪತ್ರಕರ್ತ ಮೇಲೆ ಹಲ್ಲೆ, ಸುಳ್ಳು ಪ್ರಕರಣ ದಾಖಲಿಸುವು ಇಂತಹ ಪ್ರಕರಣಗಳು ನಡೆಯುತ್ತಿವೆ. ಪತ್ರಕರ್ತರ ಮೇಲೆ ಎಷ್ಟೆ ದೊಡ್ಡ ವ್ಯೆಕ್ತಿಗಳು ಹಲ್ಲೆ, ಅವಮಾನ ಮಾಡಿದ್ದರೆ ಅಂತಹವರ ವಿರುದ್ಧ ಶಿಕ್ಷೆ ಆಗುವಂತೆ ಕೋರ್ಟ್ ನೀಡಿರುವ ತೀರ್ಪು ಸ್ವಾಗತರ್ಹ.ಇದರಿಂದಾಗಿ ಪತ್ರಕರ್ತರನ್ನ ಕುಗ್ಗಿಸುವುದನ್ನ ತಡೆದಂತಾಗಿದೆ.
ಎಸ್.ಟಿ.ನವೀನ್ ಕುಮಾರ್, ನಿರ್ದೆಶಕರು, ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಸಂಪಾದಕರುಗಳ ಸಂಘ, ಬೆಂಗಳೂರು ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು
–