ಸುದ್ದಿಬಿಂದು ಬ್ಯೂರೋ
ಚಿತ್ರದುರ್ಗ: ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಶಾಲಾ ಶಿಕ್ಷಕಿಯೋರ್ವಳು ಮೃತಪ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಪವಿತ್ರ (30) ಬಾಂಡ್ರವಿ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ‌. ರಾಂಪುರ ಗ್ರಾಮದ ಲೋಟಸ್ ಆಸ್ಪತ್ರೆ ವೈಧ್ಯರ ವಿರುದ್ದ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಮೃತ ಶಿಕ್ಷಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ..

ಅನಸ್ತೆಷಿಯಾ ವೈದ್ಯ ಡಾ. ಶಬ್ಬಿರ್ ಹಾಗೂ ಸ್ತ್ರೀ ರೋಗ ತಜ್ಞೆ ಶ್ರೀದೇವಿ ವಿರುದ್ದ ನಿರ್ಲಕ್ಷ್ಯದ ಆರೋಪ ಮಾಡಲಾಗಿದೆ., ಬಳ್ಳಾರಿಗೆ ಕಳುಹಿಸಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಮತ್ತೆ ಬನ್ನಿ ಎಂದು ವೈದ್ಯರು ಹೇಳಿದ್ದರಂತೆ. ವಾಪಸ್ ಬಂದ ಬಳಿಕ ಆಸ್ಪತ್ರೆಯಲ್ಲಿ ಗಂಟೆಗಟ್ಟಲೇ ಕಾಯಿಸಿದ್ದ ವೈದ್ಯರು, ಮಧ್ಯರಾತ್ರಿ 1:30 ಕ್ಕೆ ಹೈಬಿಪಿಯಿಂದ ಮೃತಪಟ್ಟಿದ್ದಾಗಿ ಸಬೂಬು ನೀಡಿದ್ದಾರೆಂದು ದೂರಲಾಗಿದೆ.

ಮಗು ಹೊಟ್ಟೆಯೊಳಗೆ ಮೃತಪಟ್ಟ ಪರಿಣಾಮ ಶಿಕ್ಷಕಿಯ ಆಪರೇಷನ್ ಮಾಡುತ್ತಿದ್ದ ವೇಳೆ ಸಾವು ಸಂಭವಿಸಿದೆ. ಇದರಿಂದ ರೋಸಿ ಹೋದ ಪತಿ ಶಶಿಧರ ವೈದ್ಯರ ವಿರುದ್ಧ ದೂರಿದ್ದಾರೆ. ಈ ಬಗ್ಗೆ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.