ಸುದ್ದಿಬಿಂದು ಬ್ಯೂರೋ
ಕಾರವಾರ : ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನು 3 ರಿಂದ 4 ದಿನ ಭಾರೀ ಮಳೆಯಾಗುವ ಸಾದ್ಯತೆಯಿದ್ದು, ಈ ಅವಧಿಯಲ್ಲಿ ಯಾವುದೇ ಪ್ರಾಕ್ರತಿಕ ವಿಕೋಪಗಳು ಉಂಟಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಮುದ್ರ ಪ್ರಕ್ಷುಬ್ಧ ಗೋಂಡಿರುವ ಕಾರಣ ಮೀನುಗಾರರು ಮೀನುಗಾರಿಕೆ ಗೆ ತೆರಳದಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಮೀನುಗಾರಿಕೆ ಇಲಾಖೆ ಮೂಲಕ ಎಲ್ಲಾ ಮೀನುಗಾರರಿಗೆ ಅಗತ್ಯ ಮಾಹಿತಿ ತಲುಪಿಸುವಂತೆ ಸೂಚಿಸಿದ್ದಾರೆ.

ಮಳೆಯಿಂದ ಮನೆ ಕುಸಿತ ದಿಂದ ಜೀವ ಹಾನಿ ಹಾಗೂ ಜಾನುವಾರು ಹಾನಿಯಾಗದಂತೆ ಮುನ್ನೆಚ್ಚರುಕೆ ಕೈಗೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಈ ಬಗ್ಗೆ ಪಂಚಾಯಿತಿ ಮೂಲಕ ಜಾಗೃತಿ ಮುಡಿಸುವಂತೆ ಹಾಗೂ ತೀರಾ ಹಳೆಯ ಮನೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಮಳೆ ನಿಲ್ಲುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಜಾಗ್ರತಿ ಮೂಡಿಸಬೇಕು ಎಂದಿದ್ದಾರೆ.

ಗ್ರಾಮಗಳಲ್ಲಿ ಚರಂಡಿ ನೀರು ಹರಿಯಲು ಸಾಧ್ಯವಾದಗೆ ಮನೆಗಳಿಗೆ ನೀರು ನುಗ್ಗದಂತೆ ಹಾಗೂ ರಸ್ತೆಗೆ ಹರಿಯದಂತೆ ,ಸರಾಗವಾಗಿ ನೀರು ಹರಿಯಲು ವ್ಯವಸ್ಥೆ ಮಾಡಬೇಕು. ಮುಂಜಾಗ್ರತೆ ಯಾಗಿ ಕಾಳಜಿ ಕೇಂದ್ರ ತೆರೆಯಲು ಸ್ಥಳ ಗುರುತಿಸಿಕೊಟ್ಟುಕೊಳ್ಳುವಂತೆ ಹಾಗೂ ಮುಳುಗುಗಾರರು ಹಾಗೂ ದೋಣಿಗಳನ್ನು ಸಿದ್ಧ ಪಡಿಸಿಟ್ಟುಕೊಳ್ಳುವಂತೆ‌‌ ತಿಳಿಸಿದ್ದಾರೆ..

ಮಳೆಯಿಂದ ಹಾನಿಯಾದ ಪ್ರಕರಣದಲ್ಲಿ ಆದಷ್ಟು ಶೀಘ್ರದಲ್ಲಿ ಪರಿಹಾರ ವಿತರಿಸುವಂತೆ ಸೂಚನೆ ನೀಡಿದ ಅವರು ಪರಿಹಾರ ನೀಡಲು ಹಣದ ಕೊರತೆಯಿಲ್ಲ ಎಂದಿದ್ದರೆ. ಜಿಲ್ಲೆಯ ಅಂಕೋಲಾ ಮತ್ತು ಹೊನ್ನಾವರ ದಲ್ಲಿ ಇರುವ ಎಸ್.ಡಿ.ಆರ್.ಎಫ್ ತಂಡಗಳಿಗೆ ಅಗತ್ಯ ಬಿದಲ್ಲಿ ತಕ್ಷಣ ನೆರವಿಗೆ ಸಿದ್ಧವಿರುವಂತೆ ಸೂಚನೆ ನೀಡಿದ್ದಾರೆ.

ಭೂ ಕುಸಿತ ಸಂಭವಿಸಬಹುದಾದ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆ ಪ್ರದೇಶದಲ್ಲಿ ವಾಸಿಸುಸುವ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದ್ದಾರೆ.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಹಾಗೂ ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿ ಗಳು ಹಾಗೂ ತಹಶೀಲ್ದಾರ್ ಗಳು ಭಾಗವಹಿದ್ದರು.