ಸುದ್ದಿಬಿಂದು ಬ್ಯೂರೋ
ಕುಮಟ : ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಯಕ್ಷಗಾನದ ಹಿರಿಯ ಕಲಾವಿದ ಬರ್ಗಿಯ ನಾರಾಯಣ ನಾಯ್ಕ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಾರಾಯಣ ನಾಯ್ಕ ಅವರು ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣ ಅವರನ್ನ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಚಿಕಿತ್ಸೆಗೆ ಒಳಗಾಗಿದ್ದ ನಾರಾಯಣ ನಾಯ್ಕ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಇವರು ತೀರಾ ಬಡ ಕುಟುಂಬದಲ್ಲಿ ಜನಿಸಿದ್ದು, ಇಬ್ಬರೂ ಗಂಡು, ಇಬ್ಬರೂ ಹೆಣ್ಣು ಮಕ್ಕಳು ಹಾಗೂ ಪತ್ನಿ, ಸಹೋದರರನ್ನ ಅಗಲಿದ್ದಾರೆ. ನಾರಾಯಣ ನಾಯ್ಕ ಬಡತನ ಕುಟುಂಬದಲ್ಲಿ ಹುಟ್ಟಿದ್ದರು, ಸಹ ಯಕ್ಷಗಾನ ಕಲೆಯಲ್ಲ ತನ್ನದೆ ಆದ ಛಾಪು ಮೂಡಿಸಿದ್ದರು.ಯಕ್ಷಗಾನದಲ್ಲಿ ಎಲ್ಲಾ ಪಾತ್ರಕ್ಕೂ ಸಹ ನಾರಾಯಣ ನಾಯ್ಕ ಜೀವ ತುಂಬುತ್ತಿದ್ದರು. ಇವರ ಕಲೆಗೆ ಸಾಕಷ್ಡು ಸನ್ಮಾನ,ಪುರಸ್ಕಾರಗಳು ಸಹ ದೊರತ್ತಿದ್ದು, ತಾನು ಯಕ್ಷಗಾನ ಪಾತ್ರ ಮಾಡಿರುವುದಷ್ಟೆ ಅಲ್ಲದೆ. ಅನೇಕ ಯುವಕರಿಗೆ ಯಕ್ಷಗಾನದ ಕಲೆಯ ಬಗ್ಗೆ ಅರಿವು ಮೂಡಿಸುತ್ತಿದ್ದರು..