ಸುದ್ದಿಬಿಂದು ಬ್ಯೂರೋ
ಶಿರಸಿ:
ಹಾವು ಕಂಡರೆ ಎಷ್ಟೆ ದೈರ್ಯವಂತರಾದರೂ ಮಾರ ಉದ್ದ ಓಡುವವರೆ ಜಾಸ್ತಿ ಹೀಗಿರುವಾಗ 6ವರ್ಷದ ಬಾಲಕ ತನಗಿಂತ ಮೂರು ಪಟ್ಟು ಉದ್ದವಿರುವ ಕಾಳಿಂಗ ಸರ್ಪವನ್ನ ಹಿಡಿದು, ಅದರೆ ಜೊತೆ ಆಟವಾಡುತ್ತಾನೆ.

ವಿರಾಜ್ ಪ್ರಶಾಂತ ಹುಲೇಕಲ್ ಎಂಬಾತನೇ ಈ ರೀತಿ ಸಾಹಸ ಮಾಡಿದ ಬಾಲಕ. ಈತ ಒಂದೇ ತರಗತಿಯಲ್ಲಿ ಓದುತ್ತಿದ್ದಾನೆ. ಈ ಬಾಲಕನ ಚಿಕ್ಕವನಾಗಿದ್ದರು ಅಪಾಯಕಾರಿ ವಿಷ ಪರಿತ ಹಾವುಗಳನ್ನ ಹಿಡಿದು ಅದರ ಜೊತೆ ಆಟ ಆಡುವುದನ್ನ ಒಮ್ಮೆ ನೋಡಿದ್ದರೆ ಎಂಥವ ಮೈ ಆದರೂ ಜುಮ್ಮ ಎನ್ನದೆ ಇರದು. ಆತ ಹಾವು ಹಿಡಿಯುವುದಷ್ಟೆ ಅಲ್ಲದೆ ಪರಿಣಿತ ಉರಗ ರಕ್ಷಕರಂತೆ ಆಟವಾಡುತ್ತಾನೆ.

ವಿರಾಜ್ ಶಿರಸಿ ಕೆ.ಎಚ್‌.ಬಿ. ಕಾಲೋನಿಯ ಸ.ಹಿ.ಪ್ರಾ.ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾನೆ. ವಿರಾಜ್‌ ಈ ಧೈರ್ಯ ಬರುವುದರ ಹಿಂದೆ ಪಾಲಕರ ಶ್ರಮ ಸಹ ಇದೆ. ಉರಗ ತಜ್ಞ ಪ್ರಶಾಂತ ಹುಲೇಕಲ್‌ಡಿ ಮಗನಾಗಿರುವ ವಿರಾಜ್‌ ಪಾಲಕರು ಬಾಲ್ಯದಲ್ಲೇ ಹಾವಿನ ಬಗ್ಗೆ ಜ್ಞಾನ ಮೂಡಿಸಿದ್ದಾರೆ. ಹಾವಿನ ನಡೆ ಹೇಗಿರುತ್ತದೆ. ಹಾವಿನ ಗಮನವನ್ನು ಬೇರೆಡೆ ಹೇಗೆ ಸೆಳೆದು ಅದನ್ನು ಹಿಡಿಯಬೇಕು ಎಂಬುದನ್ನು ಈತ ಪಾಲಕರಿಂದ ಕಲಿತಿದ್ದಾನೆ. ಯಾವ ಹಂತದಲ್ಲಿ ಹಾವು ದಾಳಿ ಮಾಡುತ್ತದೆ, ಸುರಕ್ಷತೆ ಹೇಗೆ ಎಂಬುದು ಈ ಬಾಲಕ ಕರಗತವಾಗಿದೆ.

ಯಾವುದೇ ವಿಷಪೂರಿತ ಹಾವಿರಲಿ ಈತನ ಮುಂದೆ ಶರಣಾಗಲೇಬೇಕು, ಬಾಲಕ ವಿರಾಜ್ ಹಾವನ್ನು ಹಿಡಿಯುವ ಪರಿ, ಪಳಗಿಸುವ ವಿಧಾನ ಎಲ್ಲ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ. ಬಾಲಕನ ಶೌರ್ಯ ನೋಡಿದವರೆಲ್ಲ ಪಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಯಾವುದೇ ಹಾವಿರಲಿ ಕ್ಷಣಾರ್ಧದಲ್ಲಿ ಹಾವಿನ ಜೊತೆ ಫ್ರೆಂಡ್ ಶಿಪ್ ಮಾಡಿಕೊಂಡು ಬಿಡುತ್ತವೆ. ಹಾವು ಎಂದರೇ ಈತನಿಗೆ ಎಲ್ಲಿಲ್ಲದ ಪ್ರೀತಿ, ತಂದೆ, ಅಜ್ಜನ ಹವ್ಯಾಸದ ಕಸುಬನ್ನು ಈತನು ರೂಡಿಸಿಕೊಂಡಿದ್ದಾನೆ. ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.