ಸುದ್ದಿಬಿಂದು ಬ್ಯೂರೋ
ಭಟ್ಕಳ:
ಮನೆಯಲ್ಲಿ ಯಾರು ಇಲ್ಲಸಿರುವುದನ್ನ ಗಮನಿಸಿದ್ದ ಕಳ್ಳರು,‌ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.

ರಿಬ್ಕೊ ಸಂಸ್ಥೆ ಮಾಲಿಕ ಎಸ್ ಎ ರೆಹಮಾನ್ ಎಂಬುವವರಿಗೆ ಸೇರಿರುವ ಮನೆ ಇದಾಗಿದ್ದು, ಮನೆಯಲ್ಲಿ ಯಾರು ಇಲ್ಲದನ್ನ‌ ನೋಡಿ ಹೊಂಚುಹಾಕಿದ ಕಳ್ಳರು ಕೃತ್ಯ ನಡೆಸಿದ್ದಾರೆ.ಎಸ್ ಎ ರೆಹಮಾನ್ ಕೆಲಸದ ನಿಮಿತ್ತ‌ ಕುಟುಂಬ ಸಮೇತ‌ ಬೆಂಗಳೂರಿಗೆ ಹೋಗಿದ್ದರು ಎನ್ನಲಾಗಿದೆ.

2 ಲಕ್ಷ ನಗದು, 110 ಗ್ರಾಂ ಚಿನ್ನ, ಮತ್ತು 7ಲಕ್ಷದಷ್ಟು ವಿದೇಶಿ ಕರೆನ್ಸಿ ಕಳ್ಳತನವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಶ್ವಾನದಳ ಸಿಬ್ಬಂದಿಯಿಂದ ಪರಿಶೀಲನೆ ನಡೆಸಿದ್ದಾರೆ.