ಸುದ್ದಿಬಿಂದು ಬ್ಯೂರೋ
ಕಾರವಾರ
: ಮಳೆಗಾಗಿ ಕಾದು ಕುಳಿತಿದ್ದ ರೈತರ ಮೊಗದಲ್ಲಿ ಹರ್ಷ ತುಂಬಿದ್ದು, ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು, ಮುಂದಿನ ಒಂದುವಾರಗಳ ಕಾಲ‌ ಭಾರಿ ಮಳೆಯಾಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂಗಾರು ಆರಂಭವಾಗಿ 20ದಿನದ ಬಳಿಕ ಕಳೆದ ಎರಡು ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ನಿರಂತರವಾಗಿ ಮಳೆ ಆಗುತ್ತಿರುವುದು ರೈತಾಪಿ ವರ್ಗದಲ್ಲಿ ಭರವಸೆ ಮೂಡಿಸಿದೆ. ಮಳೆಯಿಲ್ಲದೆ ಬರಿದಾಗಿದ್ದ ಕೆರೆ‌ ಕಟ್ಟೆಗಳು ಬಾವಿಗಳು ತುಂಬಿಕೊಂಡಿದೆ.

ಮುಂದಿನ ದಿನದಲ್ಲ ಭಾರೀ ಮಳೆಯಾಗಲಿರುವ ಕಾರಣ ಮೀನುಗಾರಿಕೆಗೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದ್ದು, ಕಡಲತೀರಕ್ಕೆ ಹೋಗದಂತೆ ಪ್ರವಾಸಿಗರಿಗೂ ಸೂಚಿಸಲಾಗಿದೆ.