ಧಾರವಾಡ : ಗಣೇಶನ ಬಂದೋಬಸ್ತ್ ಮುಗಿಸಿ ಮರಳಿ ಬರುತ್ತಿದ್ದ ಬೈಕಿಗೆ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ರಮ್ಯ ರೆಸಿಡೆನ್ಸಿ ಬಳಿ ನಡೆದಿದ್ದು, ಘಟನೆಯಲ್ಲಿ ಪೊಲೀಸ್ ಸ್ಥಳದಲ್ಲಿ ಮೃತಪಟ್ಟಿದ್ದು ಮಹಿಳಾ ಪೊಲೀಸ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕಿನ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬ ಮಹಿಳಾ ಪೊಲೀಸ್‌ಗೆ ಗಂಭೀರ ಗಾಯಗಳಾಗಿದ್ದು, ಮೃತ ಪೊಲೀಸ್‌ನನ್ನ ಹುಚ್ಚೇಶ ಮಲ್ಲನಗೌಡ ಹಿರೇಗೌಡರ ಎಂದು ಗುರುತಿಸಲಾಗಿದೆ. ಗರಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರನ್ನ ಬಂದೋಬಸ್ತ್‌ಗಾಗಿ ಛಬ್ಬಿಗೆ ಕಳುಹಿಸಲಾಗಿದ್ದು. ಮರಳಿ ಬರುವಾಗ ದುರ್ಘಟನೆ ನಡೆದಿದ್ದು, ಪೊಲೀಸ್‌ನ ಮೃತ ದೇಹವೂ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲುಯಾಗಿದೆ.
ಘಟನೆಯಲ್ಲಿ ಸಾವಿಗೀಡಾದ ಪೊಲೀಸ್ ಹುಚ್ಚೇಶ ಹಿರೇಗೌಡರ ಮೂಲತಃ ಬಾಗಲಕೋಟೆ ಗುಳೇದಗುಡ್ಡದವರು. 2021 ಬ್ಯಾಚಿನ ಶಿಸ್ತಿನ ಪೊಲೀಸ್, ಗರಗ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಲಕ್ಷ್ಮೀ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿಯವರು. 2019 ಬ್ಯಾಚಿನ ಲಕ್ಷ್ಮೀ ಅವರು, ಸಾಕಷ್ಟು ಜಾಣಾಕ್ಷರಿದ್ದರು. ಈ ಘಟನೆಯಿಂದ ಗರಗ ಪೊಲೀಸ್ ಠಾಣೆಯಲ್ಲಿ ನೀರವ ಮೌನ ಆವರಿಸಿದ್ದು, ಅಧಿಕಾರಿಗಳು ಧಾರವಾಡದ ಖಾಸಗಿ ಆಸ್ಪತ್ರೆಗೆ ತೆರಳಿ, ಲಕ್ಷ್ಮೀ ಅವರ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಾರಿಯಾಗಿರುವ ವಾಹನದ ಮಾಹಿತಿ ಪಡೆಯುತ್ತಿದ್ದಾರೆ.