ಸುದ್ದಿಬಿಂದು ಬ್ಯೂರೊ ವರದಿ
ಶಿರಸಿ: ಗಾಂಜಾ ಸೇವನೆ ಮಾಡುತ್ತಿದ್ದ ಓರ್ವಯುವಕನ ಬಂಧನ ಮಾಡಿರುವ ಘಟನೆ ನಗರದ ಶಂಕರಹೊಂಡದ ಸಮೀಪ ನಡೆದಿದೆ.
ಸರ್ಪರಾಜ್ ಸಮೀರ ಖಾನ್ (23)ಕಸ್ತೂರ ಬಾ ನಗರ ಶಿರಸಿ ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ನಿಷೇಧಿತ ಗಾಂಜಾ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಈತ ವಿರುದ್ದ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಿವಾಯಸ್ಪಿ ಗಣೇಶ ಕೆಎಲ್ ಮಾರ್ಗದರ್ಶನದಲ್ಲಿ ಸಿಪಿಆಯ್ ಶಶಿಕಾಂತ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ಐ ನಾಗಪ್ಪ ಬಿ ಸಿಬ್ಬಂದಿಗಳಾದ ಹನುಮಂತ ಕಬಾಡಿ, ನಾಗಪ್ಪ ಲಮಾಣಿ,ಅರುಣ ಲಮಾಣಿ, ಸತೀಶ ಅಂಬಿಗ, ಮಂಜುನಾಥ ಪಾವಗಡ, ಹನುಮಂತ ಪಾಲ್ಗೊಂಡಿದ್ದರು
ಗಮನಿಸಿ