suddibindu.in
Ankola: ಅಂಕೋಲಾ:ಜನಸಾಮಾನ್ಯರ ಸೇವೆಯನ್ನು ಮಾಡಲು ಅಂದೇ ಪಣತೊಟ್ಟು ವೈದ್ಯರಾಗಿದ್ದ ಅಂಜಲಿತಾಯಿಯವರು ಇಂದು ಉತ್ತರ ಕನ್ನಡಿಗರ ಸೇವೆ ಮಾಡಲು ಬಂದಿದ್ದಾರೆ.ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಸ್ತ್ರೀಯರಿಗೆ ಶಕ್ತಿ ತುಂಬಿ ಸ್ವಾವಲಂಬಿಗಳಾಗಿದ್ದಾರೆ,ಇತಿಹಾಸವನ್ನು ತಿರುಗಿ ನೋಡಿದರೆ ಬಡವರ ಪರ ಯೋಜನೆಗಳನ್ನು ತಂದಿದ್ದವರು ಕಾಂಗ್ರೆಸ್ ಪಕ್ಷ ಹೊರತು ಸುಳ್ಳುಬುರುಕ ಬಿಜೆಪಿ ಪಕ್ಷ ಅಲ್ಲ,ಸುಳ್ಳಿನ ಸರದಾರರಾದ ಬಿಜೆಪಿಗೆ ಮುಂಬರುವ ಲೋಕಸಭೆಯಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕನ್ನಡದ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದೇವೆ ಲೋಕಸಭೆ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು.

ಅಂಕೋಲಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೋಟೆವಾದದಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆಯ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನು ಓದಿ

ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುತ್ತಿರುವ ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷ ಹೆಚ್ಚಿನ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ, ಜನ ಸಾಮಾನ್ಯರು ಗ್ಯಾರಂಟಿಗಳ ಯೋಜನೆಗಳಿಂದ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.ಕಳೆದ ಹತ್ತು ವರ್ಷಗಳ ಬಿಜೆಪಿ ಸರಕಾರದಿಂದ ವಿದ್ಯಾವಂತ ಯುವಜನತೆಯೂ ಸಹ ನಿರುದ್ಯೋಗಿಗಳಾಗಿದ್ದಾರೆ ಇಂಡಿಯಾ ಒಕ್ಕೂಟದ ಸರಕಾರದ ರಚನೆಯಾದ ತಕ್ಷಣ ನಿರುದ್ಯೋಗ ಸಮಸ್ಯೆನ್ನು ಹೋಗಲಾಡಿಸಲು ಉದ್ಯೋಗ ಸೃಷ್ಠಿಮಾಡಿ ಯುವಜನತೆಯನ್ನು ಸದೃಡವನ್ನಾಗಿಮಾಡುವ ಗುರಿ ಹೊಂದಿದೆ ಎಂದರು.

ಉಸ್ತುವಾರಿ ಸಚಿವ ಮಂಕಾಳು ವೈದ್ಯ ಲೋಕಸಭೆ ಬಿಜೆಪಿ ಅಭ್ಯರ್ಥಿ ಇಲ್ಲಿ ಆರು ಬಾರಿ ವಿಧಾನಸಭಾ ಸದಸ್ಯರಾಗಿದ್ದವರು,ಅಂಕೋಲೆಯಲ್ಲಿ ಮೂರು ಬಾರಿ ಶಾಸಕರಾಗಿದ್ದವರು, ಇಲ್ಲಿಯೂ ಏನು ಮಾಡಿಲ್ಲ, ಶಿರಸಿಗೂ ನಯಾಪೈಸೆ ಕೆಲಸ ಮಾಡಿಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಗುಡುಗಿದ ಅವರು ಕಾಂಗ್ರೆಸ್ ಪಕ್ಷ ವೈದ್ಯಯಾಗಿರುವ ಅಂಜಲಿ ನಿಂಬಾಳ್ಕರ್ ಅವರನ್ನು ನಮ್ಮ ಲೋಕಸಭಾ ಅಭ್ಯರ್ಥಿಯಾಗಿ ನೀಡಿದೆ ಅವರನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದರು.

ಅಂಜಲಿ ನಿಂಬಾಳ್ಕರ್ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸದೃಢಗೊಳಿಸಲು ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಮಹತ್ವ ಪಾತ್ರವಹಿಸುತ್ತಿದೆ.ಬಡವರ ಬಗ್ಗೆ ಕಾಳಜಿಯಿಲ್ಲದ ಕೋಮುವಾದಿ ಬಿಜೆಪಿ ಪಕ್ಷ ಜಾತಿ ಧರ್ಮಗಳ ಮೇಲೆ ಚುನಾವಣೆ ಎದುರಿಸುತ್ತದೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಡವರ ವಿರೋಧಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವ್ಕರ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅದ್ಯಕ್ಷೆ ಸುಜಾತಾ ಗಾಂವ್ಕರ್,ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ,ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾಂಡುರಂಗ ಗೌಡ ಹಾಗೂ ಪ್ರಮುಖರಾದ ರಮಾನಂದ ನಾಯಕ,ಮಾಜಿ ಶಾಸಕ ಕೆ ಎಚ್ ಗೌಡ ಮಾಜಿ ಜಿಪಂ ಸದಸ್ಯೆ ಸರಳಾ ನಾಯಕ,ವಾಸರ್ ಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ ಮುಂತಾದವರು ಉಪಸ್ಥಿತರಿದ್ದರು.