ಹಳಿಯಾಳ : ದಾಖಲೆ ಇಲ್ಲದೇ ಸಾಗಿಸುತ್ತಿದ್ದ 17 ಲಕ್ಷ ರೂ. ಹಣವನ್ನು ಹಳಿಯಾಳದ ಅರ್ಲವಾಡ ಚೆಕ್ ಪೊಸ್ಟ್ ನಲ್ಲಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಧಾರವಾಡ ಜಿಲ್ಲೆ ಅಳ್ನಾವರ ನಗರದಿಂದ ಹಳಿಯಾಳಕ್ಕೆ ಬರುತ್ತಿದ್ದ ಟಾಟಾ ಇಕ್ಕೊ ವಾಹನವನ್ನು ಹಳಿಯಾಳ ಗಡಿ ಭಾಗದ ಅರ್ಲವಾಡ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ನಡೆಸಿದಾಗ ಸುಮಾರು 17 ಲಕ್ಷ ರೂ. ನಗದು ಪತ್ತೆಯಾಗಿದೆ.

ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ನೌಕರರಾದ ಭಾಸ್ಕರ ಕಾಳಗಿನಕೊಪ್ಪ(ಚಾಲಕ), ರೆಣುಕಾ ಹಿರೆಮಠ, ಮಂಗಲಾ ನೇಲ್, ಬಸವರಾಜ ಅವರು ಕೆಎ ೨೦, ಎಎ೪೯೭೨ ವಾಹನದಲ್ಲಿ ಈ ಹಣವನ್ನು ಸಾಗಿಸುತ್ತಿದ್ದರು.

ಚೆಕ್ ಪೊಸ್ಟ್ ನಲ್ಲಿ ತಪಾಸಣೆ ನಡೆಸಿ ಹಣದ ದಾಖಲೆಗಳನ್ನು ಕೆಳಿದಾಗ ಸರಿಯಾದ ಯಾವುದೇ ದಾಖಲೆ ಇಲ್ಲದ‌ ಕಾರಣ 17 ಲಕ್ಷ ಹಣ ವಶಕ್ಕೆ ಪಡೆದು ಸಂಬಂದಿಸಿದ ಜಿಲ್ಲಾ ಸ್ಕ್ರೀನಿಂಗ್ ಕಮಿಟಿ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಪಿಎಸ್ ಐ ಅಮೀನ್ ಅತ್ತಾರ ಸಿಬ್ಬಂದಿಗಳು ಹಾಗೂ ಎಸ್ ಎಸ್ ಟಿ ತಂಡದ ದರ್ಶನ್ ನಾಯ್ಕ ಇದ್ದರು.

ಘಟನಾ ಸ್ಥಳಕ್ಕೆ ಚುನಾವಣಾಧಿಕಾರಿ(ಆರ್ ಓ) ಸ್ಟೇಲ್ಲಾ ವರ್ಗಿಸ್ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆಂದು ಕೂಡ ಮಾಹಿತಿ ಲಭ್ಯವಾಗಿದೆ.