ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ಬಾವಿಯಲ್ಲಿ ರಿಂಗ್ ರಿಪೇರಿ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಮಾವಿನಕಟ್ಟಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಗೋವಿಂದ ಪೂಜಾರಿ(60), ಗಣೇಶ ಶೇಟ್ (23), ಸುರೇಶ ನಾಯರ್ (40) ಮೃತ ದುರ್ದೈವಿಗಳಾಗಿದ್ದಾರೆ. ಓರ್ವ ವ್ಯಕ್ತಿ ಮೊದಲು ಪಂಪ್ ರಿಪೇರಿಗೆ ಎಂದು ಬಾವಿಗೆ ಇಳಿಸಿದ್ದು, ಈ ವೇಳೆ ಆತ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದ ಎನ್ನಲಾಗಿದೆ. ಬಳಿಕ ಆತ ಬಿದ್ದಿರುವುದನ್ನ ನೋಡಿದ ಇನ್ನೋರ್ವ ವ್ಯಕ್ತಿ ಮುಳುಗಡೆಯಾಗಿದ್ದವ ರಕ್ಷಣೆಗೆ ಎಂದು ನೀರಿಗೆ ಇಳಿದಿದ್ದ, ಇವರು ಸಹ ನೀರಿನಲ್ಲಿ ಮುಳುಗಡೆ ಆಗಿರುವುದನ್ನ ಗಮನಿಸಿದ ಮೂರನೆ ವ್ಯಕ್ತಿ ಸಹ ಅವರಿಬ್ಬರ ರಕ್ಷಣೆಗಾಗಿ ಬಾವಿಗೆ ಹಾರಿದ್ದು, ಈ ವೇಳೆ ಮೂವರು ಸಹ ಒಬ್ಬರಿಗೆ ಒಬ್ಬರೂ ರಕ್ಷಣೆ ಮಾಡಲಾಗದೆ ಬಾವಿಯಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬಳಿಕ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ ಮೂವರ ಮೃತ ದೇಹವನ್ನ ಇದೀಗ ಮೇಲಕ್ಕೆ ಎತ್ತಲಾಗಿದೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.