ಸುದ್ದಿಬಿಂದು ಬ್ಯೂರೋ
ಕುಮಟಾ :
ರಾಜ್ಯವಿಧಾನಸಭಾ ಚುನಾವಣೆ ನಿನ್ನೆಯಷ್ಟೆ ಮುಕ್ತಾಯವಾಗಿದ್ದು,ಇದೀಗ ಏನಿದ್ದರೂ ಮತ ಏಣಿಕೆ ಮಾತ್ರ ಬಾಕಿ ಇದ್ದು, ಉತ್ತರಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಡಾ. ಎ ವಿ ಬಾಳಿಗಾ ಕಾಲೇಜಿನ ಮತ ಏಣಿಕೆ ಕೇಂದ್ರದಲ್ಲಿ ಭದ್ರವಾಗಿದೆ.

ಮೇ 13ರಂದು ಮತ ಮತ ಏಣಿಕೆ ಪ್ರಕ್ರಿಯೆ ನಡೆಯಲಿದ್ದು, ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯ ಎಲ್ಲಾ ಮತ‌ಪೆಟ್ಟಿಗೆಯನ್ನ ಕುಮಟಾ ವಿಧಾನಸಭಾ ಕ್ಷೇತ್ರದದಲ್ಲಿರುವ ಡಾ. ಎ ವಿ ಬಾಳಿಕಾ ಕಾಲೇಜ ನಲ್ಲಿ ಭದ್ರವಾಗಿ ಇಡಲಾಗಿದೆ. ಮತ ಏಣಿಕೆ ಕಾರ್ಯನಡೆಯುವ ಮತದ ಏಣಿಕೆ ಕೇಂದ್ರದ ಸುತ್ತ ‌ಬೀಗಿ ಭದ್ರತೆ ಮಾಡಲಾಗಿದೆ.

ಭದ್ರತೆಗಾಗಿ ಓರ್ವ ‌ಎಸ್ಪಿ, 4 ಡಿವೈಎಸ್ಪಿ, 8ಸಿಪಿಐ,18 ಪಿಎಸ್ಐ , 90 ಸಿಆರ್ ಪಿ ಎಫ್ 1ಕೆಎಸ್ಆರ್ ಪಿ ತುಕಡಿ, 70ಎಚ್ ಸಿ ಪಿ ಸಿ ಭದ್ರತಾ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದ್ದು, ಮತ ಏಣಿಕೆಯ ದಿನ ಇನ್ನೂ ಹೆಚ್ಚಿನ ಭದ್ರತೆ ಕೈಕೊಳ್ಳುವ ಸಾಧ್ಯತೆ ಇದೆ.ಮತ ಏಣಿಕೆಯ ಕೇಂದ್ರದ ಸುತ್ತ ಅಪರಿಚಿತರು ಪ್ರವೇಶಿಸದಂತೆ ನಿಗಾವಹಿಸಲಾಗಿದೆ.