ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ :ಫಾರ್ಕಿಂಗ್‌ನಲ್ಲಿ ನಿಲ್ಲಿಸಿಟ್ಟ ಕಾರೊಂದರಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಪಿಕ್ಳೆ ರಸ್ತೆಯಲ್ಲಿ ನಡೆದಿದೆ.
ನಗರದ ಪಿಕ್ಳೆ ರಸ್ತೆಯ ಫಾರ್ಕಿಂಗ್‌ನಲ್ಲಿ ಗೋವಾ ನೊಂದಣಿ ಹೊಂದಿದ್ದ ಕಾರು ನಿಲ್ಲಿಸಲಾಗಿತ್ತು.ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರ ಒಳಗೆ ಬೆಂಕಿ ಹೊತ್ತಿಕೊಂಡಿತ್ತು.ನಿಲ್ಲಿಸಿಟ್ಟ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಕ್ಕ-ಪಕ್ಕದಲ್ಲಿದ್ದ ಸ್ಥಳೀಯರು ಬೆಚ್ಚಿಬಿಳುವಂತಾಗಿತ್ತು.
ಸ್ಥಳೀಯರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದರು ಸಹ ಸಾಧ್ಯವಾಗಿಲ್ಲ.ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರಿಗೆ ಹತ್ತಿಕೊಂಡ ಬೆಂಕಿ ನಂದಿಸಿದ್ದಾರೆ.
ಗಮನಿಸಿ