ಸುದ್ದಿಬಿಂದು ಬ್ಯೂರೋ ವರದಿ (suddibindu Digital News)
ದಾಂಡೇಲಿ : ಕೌಟುಂಬಿಕ ಕಲಹಕ್ಕೆ ಬೇಸತ್ತು ವೃದ್ಧರೋರ್ವರು ದಾಂಡೇಲಿ ನಗರದ ಕುಳಗಿ ರಸ್ತೆಯ ಕಾಳಿ ನದಿಯ ಸೇತುವೆಯ ಕೆಳಗೆ ಇಳಿದು ನದಿಯ ಕಟ್ಟೆ ಮೇಲೆ ನಿಂತು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ದಾಂಡೇಲಿ ನಗರದ ಟಿ.ಆರ್.ಟಿ ಕ್ರಾಸ್ ಹತ್ತಿರದಲ್ಲಿರುವ ಸುಭಾಷ ನಗರದ ನಿವಾಸಿಯಾಗಿರುವ 74 ವರ್ಷ ವಯಸ್ಸಿನ ಹನುಮಂತ ಭಂಡಾರಿ ಎಂಬವರೇ ಆತ್ಮಹತ್ಯೆಗೆ ಯತ್ನಿಸಿ ಸ್ಥಳೀಯರು ಹಾಗೂ ಪೊಲೀಸರಿಂದ ರಕ್ಷಣೆಗೊಳಗಾದ ವೃದ್ಧರಾಗಿದ್ದಾರೆ.
ಕೌಟುಂಬಿಕ ಕಲಹದಿಂದ ಬೇಸತ್ತ ಇವರು ವಾಕಿಂಗ್ ಮಾಡುವ ನೆಪದಲ್ಲಿ ಬಂದು ಯಾರಿಗೂ ತಿಳಿಯದಂತೆ ಸೇತುವೆಯ ಕೆಳಭಾಗಕ್ಕೆ ಹೋಗಿ, ಕಟ್ಟೆಯ ಮೇಲೆ ನಿಂತು ಆತ್ಮಹತ್ಯೆಗೆ ಯತ್ನಿಸಿದ್ದಾರೆ .ಇದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ಇವರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಆದರೆ, ಮಾತು ಕೇಳದ ಇವರು ಸಾರ್ವಜನಿಕರಿಗೆ ಸತಾಯಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಠಾಣೆಯ ತನಿಖೆ ವಿಭಾಗದ ಪಿಎಸ್ಐ ಕಿರಣ್ ಪಾಟೀಲ್ ಹಾಗೂ ಎಎಸ್ಐ ಮಹೆಬೂಬ ನಿಂಬುವಾಲೆ ಹಾಗೂ ಸಿಬ್ಬಂದಿಗಳು ವೃದ್ದ ಹನುಮಂತ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ರಕ್ಷಣೆ ಮಾಡಿದ್ದಾರೆ.
ಗಮನಿಸಿ
- Fengal Cyclone:ಫೆಂಗಲ್ ಚಂಡಮಾರುತ ಹಿನ್ನಲೆ : ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಿಸಿದ ಡಿಸಿ
- Earthquake Clarification/ಭೂ ಕಂಪನದ ಬಗ್ಗೆ ರಿಕ್ಟರ್ ಮಾಪಕದಲ್ಲಿ ಯಾವುದೇ ದಾಖಲೆ ಇಲ್ಲ
- ಉತ್ತರಕನ್ನಡದಲ್ಲಿ ಕಂಪಿಸಿದ ಭೂಮಿ : ಮನೆ ಬಿಟ್ಟು ಓಡಿದ ಜನ
- ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಕೊಂದ ಪತಿ
- Govt Department:ಸರಕಾರಿ ಇಲಾಖೆ ವಿಚಾರಣೆ ನೆಪದಲ್ಲಿ ನಿವೃತ್ತ ಸರಕಾರಿ ನೌಕರನಿಗೆ ಹಿಂಸೆ