ಸುದ್ದಿಬಿಂದು ಬ್ಯೂರೋ
ಕಾರವಾರ: ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಮೂರು ಜನ ಪ್ರವಾಸಿಗರನ್ನು ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ್ದು, ಕುಮಟ ಬಾಡದಲ್ಲಿ ಸಮುದ್ರಕ್ಕಿಳಿದಿದ್ದ ಪ್ರವಾಸಿಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ(Tourist Death)ಘಟನೆ ನಡೆದಿದೆ
.

ಬಾಗಲಕೋಟೆಯಿಂದ ಮುರ್ಡೇಶ್ವರ ಪ್ರವಾಸಕ್ಕೆ(Murudeshwar Beach) ಆಗಮಿಸಿದ್ದ ಮೂವರು ಪ್ರವಾಸಿಗರು ಇಲ್ಲಿನ ಸಮುದ್ರದಲ್ಲಿ ಇಳಿದಿದ್ದು ಈ ವೇಳೆ ಸಮುದ್ರದ ಅಲೆಗೆ ಸಿಲುಕಿದ್ದು, ಇದನ್ನ ಗಮನಿಸಿದ ಅಲ್ಲಿನ ಲೈಫ್‌ಗಾರ್ಡ್ ಸಿಬ್ಬಂದಿಗಳಾದ ಶಶಿ, ಪಾಂಡು, ರಾಮಚಂದ್ರ ಅವರು ರಕ್ಷಣೆ(Rescue of Tourists)ಮಾಡಿದ್ದಾರೆ.

ಬಾಗಲುಕೋಟೆ ಮೂಲದ ಬಸವನಗೌಡ ಪಾಟೀಲ್(22), ಶರಣು ಇಂಚಲ್(21),ರವಿಚಂದ್ರನ್(22) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ

ಬಾಡ‌ ಕಡಲತೀರದಲ್ಲಿ ಪ್ರವಾಸಿಗ ಸಾವು
ಇನ್ನು ಕುಮಟಾದ ಬಾಡ ಕಡಲ ತೀರದಲ್ಲಿ‌(Bada Beach) ಶಿವಮೊಗ್ಗ ಮೂಲದ ಪ್ರಶಾಂತ್ ಗುಪ್ತ ಸಮುದ್ರದಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಶಿವಮೊಗ್ಗದಿಂದ(Shimoga) 11 ಜನರೊಂದಿಗೆ ಕುಮಟಾ ಕ್ಕೆ ಪ್ರವಾಸ ಬಂದಿದ್ದರು.ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.