ಸುದ್ದಿಬಿಂದು ಬ್ಯೂರೋ
ಕುಮಟ : ಉತ್ತರಕನ್ನಡ(Utarakannda)ಜಿಲ್ಲೆಯ ಕುಮಟ ಬಸ್ (bus) ನಿಲ್ದಾಣದಲ್ಲಿ ಕಳೆದ ಎರಡು ಗಂಟೆಯಿಂದ ಶಿರಸಿಗೆ(sirsi) ತೆರಳಲು ಸರಿಯಾದ ಬಸ್ ಇಲ್ಲದೆ ಬಸ್ ನಿಲ್ದಾಣದಲ್ಲೆ ಪ್ರಯಾಣಿಕರು ಪರದಾಡುವಂತಾಗಿದೆ.

ಬೇರೆ ಬೇರೆ ತಾಲೂಕು ಹಾಗೂ ಜಿಲ್ಲೆಯಿಂದ ಕುಮಟ(kumta)ಬಸ್ ನಿಲ್ದಾಣಕ್ಕೆ ಬರುವ ಬಸ್ ಭರ್ತಿಯಾಗಿ ಬರುತ್ತಿದ್ದು, ಇದರಿಂದಾಗಿ ಕುಮಟ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿರುವ ಪ್ರಯಣಿಕರಿಗೆ ಆ ಬಸ್ ಹತ್ತಲು ಸಾಧ್ಹವಾಗದೆ. ನಿಲ್ದಾಣದಲ್ಲೆ ಸಮಯ ಕಳೆಯುತ್ತಿದ್ದಾರೆ. ಅಲ್ಲಿರುವ ಅಧಿಕಾರಿಗಳನ್ನ ಕೇಳಿದ್ದರೆ ಸರಿಯಾಗ ಸ್ಪಂಧಿಸುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.

ಆದರೆ ಬಸ್ ನಿಲ್ದಾಣದಲ್ಲಿ ಗಂಟೆಯಿಂದ ಬಸ್ ಇಲ್ಲದೆ ವೃದ್ಧರು,ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದರು. ಅಲ್ಲಿನ ಅಧಿಕಾರಿಗಳು ಬೇರೆ ಬಸ್ ಗಳನ್ನ ಕಲ್ಪಿಸಬೇಕು ಎನ್ನುವ ಗೋಜಿಗೂ ಹೋದಂತೆ ಕಾಣುತ್ತಿಲ್ಲ.ಇದರಿಂದಾಗಿ ಪ್ರಯಾಣಿಕರು ಮಾತ್ರ ಹೈರಾಣಾಗುತ್ತಿದ್ದಾರೆ. ಕುಮಟ ಬಸ್ ನಿಲ್ದಾಣದಲ್ಲಿ ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಇಲ್ಲಿನ ಹಿರಿಯ ಅಧಿಕಾರಿಗಳ ನಿರ್ಲಕ್ಷ ತನ ಇದಕ್ಕೆಲ್ಲಾ ಕಾರಣ ಅಂತಾ ಪ್ರಯಾಣಿಕರು ಆರೋಪಿಸುತ್ತಿದ್ದಾರೆ