ಸುದ್ದಿಬಿಂದು ಬ್ಯೂರೋ
ಕುಮಟಾ : ಕರ್ನಾಟಕ ಪ್ರದೇಶ ಕಾರ್ಯ ಈಡಿಗ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಡಿ10ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಉತ್ತರಕನ್ನಡ ಜಿಲ್ಲೆಯ ನಾಮಧಾರಿ ಕುಮಟಾದ(kumta)ನಾಮಧಾರಿ ಸಭಾಭವನಲ್ಲಿ ನಡೆಯಿತು.

ಕಾರ್ಯಕ್ರಮವನ್ನ ರಾಜ್ಯ ಆರ್ಯ ಈಡಿಗ ಸಮಾಜದ ರಾಜ್ಯದ್ಯಕ್ಷ ತಿಮ್ಮೇಗೌಡರು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಮಾತನಾಡಿ.‌ಕುಮಟಾ ಜನರ ಹೃದಯದಲ್ಲಿ ಇಂದಿಗೂ ಬಂಗಾರಪ್ಪ ‌ಅವರಿದ್ದಾರೆ. ಇದನ್ನ ವಿಶ್ವಾಸದಿಂದ ಹೇಳಬಲ್ಲೆ.ಇಡೀ ರಾಜ್ಯದಲ್ಲಿ ಕುಮಟಾದ‌ ನಮ್ಮ ಸಮಾಜದವರಿಗೆ ಸ್ವಾಭಿಮಾನ ಇದೆ. ಗೌರವ ಇದೆ. ಸಮಾಜದ ಸಂಘಟನೆ ಒಗ್ಗೂಡಬೇಕು. ಸಿ ಎಂ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಈ ಸಮಾವೇಶ ಸಂಘಟಿಸಿದ್ದೇವೆ. ನಮ್ಮ ಸಮಾಜದ ಬೇಡಿಕೆಯ ಕೂಗು ಸರ್ಕಾರಕ್ಕೆ ಮುಟ್ಟಿಸಬೇಕು.ನಾರಾಯಣ ಗುರುಗಳ(Narayana Guru)ತತ್ವ ಒಪ್ಪಿಕೊಂಡು ಬರುವವರು ಒಗ್ಗಟ್ಟಾಗಬೇಕು.ಜಾತಿ ಎಂದರೆ ತಾಯಿ ಇದ್ದಂತೆ.ನಾವು ಬೇರೆ ಬೇರೆ ಸಮಾಜವನ್ನು ಗೌರವಿಸಿದರೆ ನಮ್ಮ ತಾಯಿಯನ್ನ ಗೌರವಿಸಿದಂತೆ.

ಬಂಗಾರಪ್ಪ ಅವರು ನೀಡಿದ ಹಲವು ಯೋಜನೆಗಳ ಮೂಲಕ ಇಡೀ ರಾಜ್ಯದ ಜನತೆಯ ಮನಸಿನಲ್ಲಿ ನೆಲೆಸಿದ್ದಾರೆ. ಸಂಘಟನೆಯಿಂದ ಬಹಳ ಹಿಂದೆ ಇದ್ದೇವೆ, ನಾಮಧಾರಿ, ಬಿಲ್ಲವ, ಈಡಿಗ ಎನ್ನುವ ಕೊರಗಿನಿಂದ ಎಲ್ಲೋ ಒಂದು ಕಡೆ ಸಂಘಟನೆ ಕೊರತೆ‌ ಉಂಟಾಗಿದೆ, ಬಂಗಾರಪ್ಪ ಇಂದಿಗೂ ಎಲ್ಲಾ ವರ್ಗದ ಜನರ ಹೃದಯಲ್ಲಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಜಾತಿ ನೋಡಿ ಕಾರ್ಯಕ್ರಮ ಕೊಟ್ಟಿಲ್ಲ. ನಮ್ಮ ತಂದೆ ಅವರು ಎಷ್ಟ ದೊಡ್ಡವರ ಅಂತಾ ಕಂಡು ಹಿಡಿಯೋದೆ ನನ್ನಗೆ ಕಷ್ಟವಾಗಿದೆ. ಇಂದು ಎಲ್ಲಿ ಹೋದ್ದರೂ ತಂದೆ ಅವರು ಮಾಡಿರುವ ಕಾರ್ಯವನ್ನ ಜನ ನೆನಪಿಸಿಕೊಳ್ಳುತ್ತಿದ್ದಾರೆ. ಡಿ 10ರಂದು ನಡೆಯುವ ಕಾರ್ಯಕ್ರಮ‌ ಇತಿಹಾಸವಾಗಬೇಕು.ಅದಕ್ಕೆ ನೀವಲ್ಲರೂ ಕೈ ಜೋಡಿಸಬೇಕಿದೆ.ಈ ಸಂಘಟನೆಯಿಂದ ನಮ್ಮ ಸಮಾಜದ ನೆಲಗಟ್ಟು ಗಟ್ಟಿಮಾಡಿಕೊಳ್ಳಬೇಕಿದೆ ಎಂದು ಮಧು ಬಂಗಾರಪ್ಪ ಹೇಳಿದ್ದರು.

ಆರ್ಯ ಈಡಿಗ ಸಮಾಜದ ರಾಜ್ಯದ್ಯಕ್ಷ ತಿಮ್ಮೇಗೌರು ಮಾತನಾಡಿ ಈಡಿಗ ಸಮಾಜದ ಶಕ್ತಿಯನ್ನ ಅರಮನೆ ಮೈದಾನಲ್ಲಿ ಪ್ರದರ್ಶನ ಮಾಡಬೇಕಿದ.1995ರಲ್ಲಿ ಈ ಸಮಾವೇಶ ನಡೆದಿತ್ತು.ಅವತ್ತು ಎಲ್ಲರೂ ಒಂದು ಕಡೆ ಸೆರುವಂತಾಗಿತ್ತು.1944ರಲ್ಲಿ ಈ ಸಂಘ ಆರಂಭವಾಗಿದೆ.ಎರಡು ವರ್ಷದ ಹಿಂದೆ ಈ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಬೇಕಿತ್ತು.ಆದರೆ ಕರೋನಾ ಕಾರಣದಿಂದ ಸಾಧ್ಯವಾಗಿರಲಿಲ್ಲ.26 ಪಂಗಡವನ್ನ ಒಂದೇ ವೇದಿಕೆಯಲ್ಲಿ ತರಬೇಕು ಎನ್ನುವ ಉದ್ದೇಶ ಇದಾಗಿದ್ದು ಇಂದು ಯಶಸ್ವಿಯಾಗಿ ಮಾಡಬೇಕಿದೆ ಎಂದರು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಮಾತನಾಡಿ ನಾವೇಲ್ಲರೂ ಕೂಡ ಸಮಾಜ ಸಮಾಜದ ಅಡಿಯಲ್ಲಿ ಇರಬೇಕು ಎನ್ನುವ ಉದ್ದೇಶದ ಕೂಗು ಇದೆ. ನಮ್ಮ ಜಿಲ್ಲೆಯಲ್ಲಿ ಸಮಾಜದ ಸಂಘಟನೆ ಅಚ್ಚುಕಟ್ಟಾಗಿದೆ.ಅದು ಇಲ್ಲಿಗೆ ಸಿಮೀತವಾಗಿರಬಾರದು. ಶಕ್ತಿಯುತ ಸಮಾಜ ಹೊರಹೊಮ್ಮ ಬೇಕಾದರೆ. ಡಿ 10ರಂದು ನಡೆಯಲಿರುವ ಅಮೃತ ಮಹೋತ್ಸವ ಸಮಾವೇಶದಲ್ಲಿ ಎಲ್ಲರೂ ಗುರುತಿಸಿಕೊಳ್ಳುವಂತಾಗಬೇಕಾಗಿದೆ. ಸಮಾಜದಲ್ಲಿ ಯಾವ ರೀತಿಯಲ್ಲಿ ಹಿಂದೆ ಇದ್ದೇವೆ ಎನ್ನುವುದನ್ನ ಅರ್ಥಮಾಡಿಕೊಳ್ಳ ಬೇಕು. ನಮ್ಮ ಸಮಾಜದಿಂದ ರಾಜಕೀಯವಾಗಿ ಬಂಗಾರಪ್ಪ ಅವರು ರಾಜ್ಯವನ್ನ ಆಳುವ ಅವಕಾಶ ರಾಜ್ಯದ ಜನತೆ ಮಾಡಿಕೊಟ್ಟಿದ್ದರು. ಇವತ್ತು ಎಲ್ಲಾ ಕ್ಷೇತ್ರದಲ್ಲಿಯೂ ನಾವೀದ್ದೇವೆ. ನಮ್ಮಲಿರುವ ಕಲ್ಮಶವನ್ಮ ಮೊದಲು ಹೊರ ಹಾಕಬೇಕಿದೆ ಎಂದರು.

ಇನ್ನೂ ಕಾರ್ಯಕ್ರಮದಲ್ಲಿ ಪಾಲ್ಹೊಂಡಿದ್ದ‌ ಸೂರಜ್ ನಾಯ್ಕ ಸೋನಿ ಹಾಗೂ ಮಂಜುನಾಥ ‌ಎಲ್‌ನಾಯ್ಕ ಕೂಡ ಸಮಾಜದ‌ ಸಂಗಟನೆ‌‌‌ ಕುರಿತಾಗಿ ಮಾತನಾಡಿದರು.

ವೇದಿಕೆಯಲ್ಲಿ ಕುಮಟಾ ತಾಲೂಕಾ ನಾಮಧಾರಿ ಸಮಾಜದ ಅಧ್ಯಕ್ಷರಾಗಿರುವ ಮಂಜುನಾಥ ನಾಯ್ಕ‌‌, ಕೊಡ್ಕಣಿ ಹಿರಿಯರಾದ ಆರ್ ಜಿ ನಾಯ್ಕ, ರತ್ನಾಕರ‌ ನಾಯ್ಕ, ಸುನೀಲ್ ನಾಯ್ಕ‌ ಸೋನಿ, ಯುವ ನಾಮಧಾರಿ ಸಂಘದ ತಾಲೂಕಾಧ್ಯಕ್ಷ‌ ರಾಜೇಶ‌ ನಾಯ್ಕ ಬರ್ಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಶಿಕ್ಷಕ‌ ಮಂಜು ನಾಯ್ಕ ನಿರೂಪಿಸಿದರು. ಅರುಣ ನಾಯ್ಕ ಪ್ರಾಸ್ತಾವಿಕವಾಗಿ ಮಾತ್ನಾಡಿದರು.