ಸುದ್ದಿಬಿಂದು ಬ್ಯೂರೋ
Sirsi::ಶಿರಸಿ : ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ(student)/ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನ ಉತ್ತಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ(Banavasi) ಹಾಡ್ಲಿಗಿ ಗ್ರಾಮದ ಕನಕಾಪುರ ಕೆರೆಯಲ್ಲಿ ನಡೆದಿದೆ.

ರಾಮ್ ಕುಮಾರ್ ಮಧುಕೇಶ್ವರ ನಾಯ್ಕ್, , ಮಧುರವಳ್ಳಿ ಎಂಬಾತನೇ ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕನಾಗಿದ್ದಾನೆ. ಈತ ನಾಗಶ್ರೀ ಪ್ರೌಢಶಾಲೆಯ ನಾಲ್ವರು ಸ್ನೇಹಿತರ ಜೊತೆ ನೀರಿನಲ್ಲಿ ಆಟವಾಡಲು ಕೆರೆಗೆ ಇಳಿದಿದ್ದ, ಆಕಸ್ಮಿಕವಾಗಿ ರಾಮ್ ಕುಮಾರ್ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಬನವಾಸಿ ಪಿ.ಎಸ್.ಐ. ಚಂದ್ರಕಲಾ ಪತ್ತಾರ ಅವರ ನೇತೃತ್ವದ ಪೊಲೀಸರ ತಂಡ ಸ್ಥಳೀಯ ಗ್ರಾಮಸ್ಥರು, ಅಗ್ನಿಶಾಮಕ ತಂಡ ಗೋಪಾಲಗೌಡ ನೇತೃತ್ವದ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ಟೀಮ್ ಶಿರಸಿ ಕಾರ್ಯಾಚರಣೆ ನಡೆಸಿದ್ದು, ಮೃತ ವಿದ್ಯಾರ್ಥಿಯ ಶವ ಹೊರ ತೆಗೆಯಲಾಗಿದೆ. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.