suddibindu. in
ಕಾರವಾರ : ಚಿಕನ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.? ಆದರೆ ಇದೀಗ ಚಿಕನ್ ತಿನ್ನುವ ಮೊದಲು ಹತ್ತಾರು ಬಾರಿ ಆಲೋಚನೆ ಮಾಡಲೇ ಬೇಕಿದೆ. ಅದಕ್ಕೆ ಕಾರಣಗಳು ಸಹ ಸಾಕಷ್ಟಿದೆ. ಅದೇನು ಎನ್ನುವುದರ ಬಗ್ಗೆ ಈ ಸುದ್ದಿಯನ್ನ ಸಂಪೂರ್ಣವಾಗಿ ಓದಿ.

ಚಿಕನ್ ಖರೀದಿ ಮಾಡುವವರು ಯಾರು ಕೂಡ ಕೋಳಿ ಪಾರ್ಮಗಳಿಗೆ ಹೋಗೋದಿಲ್ಲ. ಎಲ್ಲರೂ ಸಹ ಚಿಕನ್‌ ಸೆಂಟರ್ ಗಳಿಗೆ ಹೋಗಿ ಖರೀದಿ ಮಾಡತ್ತಾರೆ. ಇದು ಮಾಮೂಲು ಸಹ, ದೊಡ್ಡ ದೊಡ್ಡ ಫಾರ್ಮ್ ಗಳವರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಚಿಕನ್ ಸೆಂಟರ್ (ಚಿಕನ್ ಮಾರಾಟ ಅಂಗಡಿಗಳಿಗೆ) ಕೊಟ್ಟು ಹೋಗತ್ತಾರೆ. ಆದರೆ ಅವರು ಕೊಟ್ಟು ಹೋಗುವ ಕೋಳಿಗಳು ಒಂದೇ ದಿನದಲ್ಲಿ ಎಲ್ಲವೂ ಖಾಲಿ ಆಗೋದು ತುಂಬಾ ಕಡಿಮೆ.ಕೊನೆ ಕ್ಷಣ ಒಂದೆರಡು ಕೋಳಿ ಆದರೂ ಉಳಿದುಕೊಳ್ಳದೆ.

ಇದನ್ನೂ ಓದಿ

ಆ ಉಳಿದ ಕೋಳಿಗಳನ್ನ ಈ ಚಿಕನ್ ಅಂಗಡಿ ಮಾಲೀಕರು ಇಟ್ಟುಕೊಳ್ಳುವುದನ್ನ ಕಣ್ಣಾರೆ ಕಣ್ಣರೆ ಯಾರು ಸಹ ನಾಳೆಯಿಂದ ಚಿಕನ್ ಖರೀದಿ ಮಾಡಲ್ಲ. ಆ ರೀತಿಯಾಗಿರತ್ತೆ‌. ಇವತ್ತು ಖರೀದಿ ಮಾಡಿದ ಎಲ್ಲಾ ಕೋಳಿ ಖಾಲಿ ಆಗಿಲ್ಲ ಅಂದರೆ ಆ ಚಿಕನ್ ಮಾರಾಟ ಮಾಡುವ ಅಂಗಡಿಕಾರರು ಸಣ್ಣ ಪುಟ್ಟ ಜಾಗದಲ್ಲಿ ಉಳಿದ ಕೋಳಿಗಳನ್ನ ಬಿಟ್ಟು ಅದಕ್ಕೆ ಆಹಾರ ಹಾಕತ್ತಾರೆ. ಆದರೆ ಅಲ್ಲಿ ಯಾವುದೇ ರೀತಿಯಲ್ಲಿ ಭದ್ರತೆ ಇರೋದು ತುಂಬಾ ವಿರಳ. ಈ ವೇಳೆ ಕೋಳಿಯ ಆಹಾರದ ವಾಸನೆಯನ್ನ ಹುಡಿಕಿಕೊಂಡು, ಇಲಿ,ಹಾವು ಸೇರಿದಂತೆ ಬೇರೆ ಬೇರೆ ವಿಷಕಾರಿ ಜೀವಿಗಳು ಅಲ್ಲಿಗೆ ಬಂದು ಕೋಳಿಗೆ ಇಟ್ಟ ಆಹಾರ, ನೀರು ಸೇವಿಸಿ ತನ್ನ ಹೊಟ್ಟೆ ತುಂಬಿದ ನಂತರದಲ್ಲಿ ಉಳಿದ ಆಹಾರವನ್ನ ಹಾಗೆ ಬಿಟ್ಟು ಹಾಗೆ ಹೋಗುತ್ತೆ, ಇನ್ನೂ ಕೆಲವು ಪ್ರಾಣಿಗಳು ಅಲ್ಲಿರುವ ಕೋಳಿಗಳಿಗೆ ತನ್ನ ವಿಷವನ್ನ ಕಾರಿ(ಬಿಟ್ಟು) ವಾಪಸ್ ಆಗುತ್ತದೆ. ಇದು ಹೆಚ್ಚಾಗಿ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೆಸರು ಹೇಳಲು ಬಯಸದ ಚಿಕನ್‌ ಪ್ರೀಯರು ಹೇಳಿಕೊಂಡಿದ್ದಾರೆ. ನಾನು ಒಮ್ಮೆ ಚಿಕನ್ ತೆಗದುಕೊಳ್ಳಬೇಕು ಎಂದು ಚಿಕನ್ ಸೆಂಟರ್ (ಅಂಗಡಿಗೆ) ಹೋಗಿದ್ದೆ. ಆಗ ಕೋಳಿಯನ್ನ ಆಯ್ಕೆ ಮಾಡಬೇಕು ಹೋದ ಸಂದರ್ಭದಲ್ಲಿ ಕೋಳಿಗಾಗಿ ಇಟ್ಟ ಆಹಾರವನ್ನ ಒಂದು ಹಾವು ಸೇವನೆ ಮಾಡುತ್ತಿರುವುದನ್ನ ಕಂಡೆ. ಆದರೆ ಆ ಹಾವು ನನಗೆ ನೋಡಿದಾಕ್ಷ ತಕ್ಷಣ ಅಲ್ಲಿಂದ ಓಡಿ ಹೋಯತ್ತು. ಅಂತಾ ತಿಳಿಸಿದ್ದಾರೆ. ಹೀಗಾಗಿ ಆ ಹಾವು ಕುಡಿದು ಹೋದ ನೀರು, ಆಹಾರವನ್ನ ಅಲ್ಲಿರುವ ಕೋಳಿಗಳು ಸೇವನೆ ಮಾಡಿದರೆ ಮುಂದೆ ಏನಾಗಬಹುದು ಎಂದು ಒಮ್ಮೆ ಎಲ್ಲರೂ ಊಹಿಸಲೇಬೇಕಾಗಿದೆ.

ಅಲ್ಲಿ ಉಳಿದ ಕೋಳಿಗಳು ಅದೇ ಆಹಾರವನ್ನ ಸೇವಿಸಿದ್ದರೆ ಆ ವಿಷಕಾರಿ ಪದಾರ್ಥಗಳು ಕೋಳಿಯನ್ನ ನಿಧಾನವಾಗಿ ಸೇರಿಕೊಂಡಿರುತ್ತದೆ. ನಂತರ ನಾವು,ನೀವೇಲ್ಲಾ ಅದೆ ಕೋಳಿಯನ್ನ ತಂದು ತಿಂದರೆ ನಮ್ಮೇಲ್ಲರ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನ ನಾವೇಲ್ಲರೂ ಒಮ್ಮೆ ವಿಚಾರಿಸಬೇಕಿದೆ. ಹೀಗಾಗಿ ಚಿಕನ್ ಸೆಂಟರ್‌ಗಳಿಗೆ ಹೋಗಿ ‌ಚಿಕನ್ ಖರೀದಿ ಮಾಡುವ ಮೊದಲು ಎಲ್ಲರೂ ನೂರು ಬಾರಿ ಯೋಜನೆ ಮಾಡಬೇಕಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಹ ಎಚ್ಚೇತ್ತುಕೊಳ್ಳದೆ ಹೋದರೆ ಮುಂದಿನ ದಿನದಲ್ಲಿ ಜನರ ಆರೋಗ್ಯ ಸ್ಥಿತಿ ಏನಾಗಬಹುದು ಅಂತಾ ನಾವು,ನೀವು ಎಲ್ಲರೂ ಯೋಚನೆ ಮಾಡಲೇ ಬೇಕಿದೆ.

ಆಹಾರ ಇಲಾಖೆ ಅಧಿಕಾರಿಗಳೆ ಎಲ್ಲಿದ್ದೀರಾ.?

ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿಕನ್ ಅಂಗಡಿಗಳು ಸುಸಜ್ಜಿತವಾಗದೆ ಇರುವ ಬಗ್ಗೆ ಸುದ್ದಿಬಿಂದು ಗೆ ಸಾವಿರಾರು ಕರೆಗಳು ಬರಲಾರಂಭಿಸಿದೆ..ನೀವು ಯೋಗ್ಯವಾದ ಸುದ್ದಿಗಳನ್ನ ಮಾಡಿದ್ದೀರಾ ಎಂದು. ಆದರೆ ಆಹಾರ ಇಲಾಖೆಯ ಅಧಿಕಾರಿಗಳು ಮಾತ್ರ ಎಲ್ಲಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ.ಎರಡು ಮೂರು ದಿನಗಳ ಹಿಂದೆ ಸತ್ತ ಕೋಳಿಯನ್ನ ಪ್ರೀಜ್‌ಗಳಲ್ಲಿ ಇಟ್ಟು ನಂತರ ಅದನ್ನೆ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅದನ್ನೇ ಜನ ತಿನ್ನ ಬೇಕಾದ ಪರಿಸ್ಥಿತಿ ಉಂಟಾಗಿದೆ. ಕುಮಟಾ ಪಟ್ಟಣದ ವಿವೇಕ ನಗರದ ಹತ್ತಿರದ ಹೆಗಡೆ ಕ್ರಾಸ್ ಬಳಿ ಇರುವ ಚಿಕನ್ ಅಂಗಡಿಯಲ್ಲಿ ವ್ಯಕ್ತಿ ಓರ್ವರು ಚಿಕನ್ ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ನೋಡಿದಾಗ ಅದು ಐಸ್ ನಿಂದ ತುಂಬಿತ್ತು‌. ಎನ್ನಲಾಗಿದೆ. ಬಳಿಕ ಗ್ರಾಹಕರು ವಾಪಸ್ ಮನೆಗ ತೆಗೆದುಕೊಂಡು ಹೋದ ಚಿಕ್ ವಾಪಸ್ ಅಂಗಡಿಗೆ ತಂದು ಮಾಲೀಕನ ಬಳಿ ಕೇಳಿದರೆ ನೀವೆ ಮನೆಯಲ್ಲಿ ಪ್ರೀಜ್ ನಲ್ಲಿ ಇಟ್ಟಕೊಂಡು ತಂದಿದ್ದೀರಿ ಎಂದು ಧಮಕ್ಕಿ ಹಾಕಿದ್ದಾರೆ. ನಂತರ ಆ ಗ್ರಾಹಕರೊಬ್ಬರು ಎಲ್ಲಾ ಚಿಕನ ಅಂಗಡಿ ಎದುರಿನ ಗಟಾರದಲ್ಲಿ ಎಸೆದು ಬಂದಿದ್ದಾರೆ ಎನ್ನಲಾಗಿದೆ. ಈ ಎಲ್ಲದರ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸದೆ ಹೋದರೆ ಅದೆಷ್ಟೋ ಜೀವಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ.