ಸುದ್ದಿಬಿಂದು ಬ್ಯೂರೋ
ಸಿದ್ಧಾಪುರ : ರೈತರ ಕಷ್ಟ‌ ನಿಮ್ಮಗೇನ್ರಿಗೊತ್ತು.‌? ಕಷ್ಟಪಟ್ಟು ಜೀವನ ಮಾಡತ್ತಾ ಇದ್ದರೆ‌ ಅವರಿಗೆ ತೊಂದರೆ‌‌ ಕೊಡತ್ತಿರಾ..? ನಾನು ಒಬ್ಬ ರೈತ‌ ತಿಳಕೊಳ್ಳಿ. ಅವರ ಕಷ್ಟ ನನ್ನಗೆ‌ ಚೆನ್ನಾಗಿ ಗೊತ್ತು. ಹೀಗಂತ ಶಿರಸಿ-ಸಿದ್ದಾಪುರ‌ ಶಾಸಕ ಭೀಮಣ್ಣ ನಾಯ್ಕ ಅರಣ್ಯ ಅಧಿಕಾರಿಗಳ ಬೆವರಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಶಾಸಕ ಭೀಮಣ್ಣ ನಾಯ್ಮ ತರಾಟೆಗೆ ತೆಗೆದುಕೊಂಡರು. ಅನೇಕ‌ ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ‌‌ ಒಂದು ಎರಡು ಗುಂಟೆ ಜಾಗವನ್ನ ಅತ್ರಿಕ್ರಮಣ ಮಾಡಿಕೊಂಡು ಬದುಕುತ್ತಿದ್ದಾರೆ.

ನೀವು ಆಂತವರನ್ನ ಓಕ್ಕಲೆಬಿಸುವ ಕೆಲಸ ಮಾಡತ್ತಿದ್ದೀರಾ ಇನ್ನೊಮ್ಮೆ ಇತರ ಆದರೆ ನಾನು ಸುಮ್ಮನಿರೋದಕ್ಕೆ ಆಗಲ್ಲ. ಇದು ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಷ್ಟೆ ಅಲ್ಲ. ಯಾವ ಇಲಾಖೆಯ ಅಧಿಕಾರಿಗಳಾದ್ದರೂ ಬಡವರ,ರೈತರ ವಿರುದ್ದ ಕೆಲಸ ಮಾಡಿದ್ದರೆ ಮುಂದೆ ಸರಿಯಾಗಿರಲ್ಲ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ.

ಇನ್ನ ಮುಂದೆ ರೈತರಿಗೆ ಬಡವರಿಗೆ ಈ ರೀತಿ ತೊಂದರೆ ಕೊಟ್ಟರೆ ಒಬ್ಬರನ್ನ ಬಿಡಲ್ಲ.ನೀವು ಏನಂತಾ ಗೋತ್ತು. ನಾವು ಜನರಿಂದ ಆಯ್ಕೆ ಆದವರು ಅವರಿಗೆ ನಾವು ಉತ್ತರ ಕೊಡಬೇಕು. ನಿಮ್ಮ ಆಟ ಮುಂದುವರೆದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.