ಸುದ್ದಿಬಿಂದು ಬ್ಯೂರೋ
ಶಿರಸಿ : 70ನೇ ಅಖಿಲಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಇಂದು ಶಿರಸಿಯಲ್ಲಿ ಸಹಕಾರಿ ಸಪ್ತಾಹ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರನ್ನ ಕಡೆಗಣಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಬಳಿ ಸಹಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ..

ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವ ಬಗ್ಗೆ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿನ AR ಹಾಗೂ DR ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಯಾರ ಮಾತು ಕೇಳಿ ಸ್ಥಳೀಯ ಶಾಸಕರನ್ನ ಕರೆಯದೆ ಅವಮಾನಿಸಿದ್ದೀರಿ.? ಶಾಸಕರನ್ನ ಈ ಕಾರ್ಯಕ್ರಮಕ್ಕೆ ಆಹ್ವಾನಿಸದಂತೆ ನಿಮ್ಮ ಮೇಲೆ ಒತ್ತಡ ಹಾಕಿರುವವರು ಯಾರು.? ಅಥವಾ ನೀವೆ ನಮ್ಮ ಶಾಸಕರನ್ನ ಅವಮಾನಿಸಬೇಕು ಅಂತಾ ಹೀಗೆ ಮಾಡಿದ್ದೀರಾ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು.‌ ಇಲ್ಲವಾದರೆ ಕಾರ್ಯಕ್ರಮ ನಡೆಯಲು ಬಿಡೋದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆನ್ನಲಾಗಿದೆ.

ಇನ್ನೂ ಶಾಸಕ‌ ಭೀಮಣ್ಣ ನಾಯ್ಕ ಅವರನ್ನ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಆಹ್ವಾನ ಮಾಡದೆ ಇರುವುದರಿಂದ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಬರಬೇಕಿದ್ದ ಇನ್ನೂಳಿದ ಸಚಿವರು ಕಾರ್ಯಕ್ರಮಕ್ಕೆ ಬಾರದೆ ಗೈರಾಗಲಿದ್ದಾರೆ.