ಸುದ್ದಿಬಿಂದು ಬ್ಯೂರೋ
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ (Uttara kannada) ಅಂಕೋಲಾ ತಾಲೂಕಿನ ಹೊಸಕಂಬಿ ಸಮೀಪ ಗಂಗಾವಳಿ ನದಿಯಲ್ಲ ಬೃಹತ್ ಗಾತ್ರದ ಮೊಸಳೆಯೊಂದು (Crocodile)ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಆತಂಕ‌‌ ಮನೆ‌ ಮಾಡಿದೆ.

ಗಂಗಾವಳಿ ನದಿಯಲ್ಲಿ (Gangavali river) ಕಾಣಿಸಿಕೊಂಡ ಈ ಮೊಸಳೆ‌ ಸರಿ ಸುಮಾರು 7 ಅಡಿ ಉದ್ದವಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ನದಿಯಲ್ಲಿ ಮೊಸಳೆ‌ ಕಾಣಿಸಿಕೊಂಡಿರುವುದರಿಂದ ನದಿ ತೀರದಲ್ಲಿನ‌ ಜನರು ಆತಂಕಕ್ಕೆ ಒಳಗಾಗುವಂತಾಗಿದೆ.

ಗಂಗಾವಳಿ ನದಿಯಲ್ಲಿ ಒಂದು ಕಡೆ ಮೀನುಗಾರಿಕೆ ನಡೆಸಲಾಗುತ್ತಿದ್ದರೆ. ನದಿ ಅಕ್ಕಪಕ್ಕದಲ್ಲಿ ಸಾಕಷ್ಟು ಕೃಷಿ ಭೂಮಿಗಳಿದೆ. ಇದೀಗ ಗಂಗಾವಳಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವುದು ಮೀನುಗಾರರಿಗೆ ಹಾಗೂ ಕೃಷಿಕರಲ್ಲಿ ಸಹಜವಾಗಿ ಆತಂಕ ಎದುರಾಗಿದೆ.

ಮೊಸಳೆ‌ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿರುವಂತೆ ನದಿ ತೀರಕ್ಕೆ ತೆರಳಲು ಸ್ಥಳೀಯರು ಭಯಪಡುವಂತಾಗಿದೆ. ಮೊಸಳೆ‌‌ ಪ್ರತ್ಯಕ್ಷವಾಗಿತುವ ಬಗ್ಗೆ ಈಗಾಗಲೆ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು, ಮೊಸಳೆ‌ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.