ಸುದ್ದಿಬಿಂದು ಬ್ಯೂರೋ
ಕುಮಟ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ವರೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟ ಪಟ್ಟಣ ಹಾಗೂ ಹಿರೇಗುತ್ತಿ ಬಳಿ ನಡೆದಿದೆ.
ನಿವೃತ್ತ ಶಿಕ್ಷಕ ಗಂಭೀರ
ಇನ್ನೂ ಹಿರೇಗುತ್ತಿ ಸಮೀಪ ಸಂಜೆ ವೇಳೆಯಲ್ಲಿ ವಾಯು ವಿಹಾರಕ್ಕೆ ಹೆದ್ದಾರಿ ಬಂದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಶಿಕ್ಷಕರಾಗಿರುವ ವಿಠೋಬ ನಾರಾಯಣ ನಾಯಕ (80) ಎಂಬುವವರಿಗೆ ಕಾಲು ಹಾಗೂ ಮುಖದ ಭಾಗದಲ್ಲಿ ಗಂಭೀರವಾಗಿ ಗಾಯವಾಗಿದ್ದು, ಅವರನ್ನ ಕುಮಟ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತಕ್ಕೆ ಕಾರಣವಾಗಿರುವ ವಾಹನವನ್ನ ಹಿರೇಗುತ್ತಿ ಪೊಲೀಸ್ ಚಕ್ ಪೊಸ್ಟ್ ನಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅಪರಿಚ ವಾಹನ ಡಿಕ್ಕಿ
ಕುಮಟ ಪಟ್ಟದ ರಾಮಲೀಲಾ ಆಸ್ಪತ್ರೆ ಸಮೀಪದ ನಡೆದ ಅಪಘಾತಲ್ಲಿ ಹೆದ್ದಾರಿ ಬದಿಯಲ್ಲಿ ವಾಹನಕ್ಕಾಗಿ ಕಾದು ನಿಂತಿದ್ದ ಮದ್ಗುಣಿ, ಹಳಕಾರ ನಿವಾಸಿ ವೆಂಕಟೇಶ ಶಂಭು ನಾಯ್ಕ (58) ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದದ್ದು, ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ತಕ್ಷಣ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.