ಸುದ್ದಿಬಿಂದು ಬ್ಯೂರೋ
ಕುಮಟ : ಸರಿಯಾದ ಮಾರ್ಗದಲ್ಲಿ ಸಂಚಾರ ಮಾಡದೆ ಇದ್ದಾಗ ಒಂದಲ್ಲಾ ಒಂದು ಅಪಘಾತ ಆಗೋದು ಬಹುತೇಕ ಪಕ್ಕಾ.ಅದೆ ರೀತಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿತ್ಯವೂ ಈ ಬಸ್ ಸರಿಯಾದ ದಿಕ್ಕಿನಲ್ಲಿ ಸಂಚರಿಸದೆ ವಿರುದ್ಧವಾದ ದಿಕ್ಕಿನಲ್ಲಿ ಸಂಚರಿಸುತ್ತಿದ್ದು, ಒಂದಲ್ಲಾ ಒಂದು ದಿನ ಅಪಘಾತ ಕಾದಿದೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.
ಪ್ರತಿನಿತ್ಯವೂ ಕುಮಟ ಬಸ್ ನಿಲ್ದಾಣದಿಂದ ಕೋಡ್ಕಣಿ,ಪಡುವಣಿ,ಕಿಮಾನಿ,ಬರ್ಗಿ ಹೀಗೆ ಈ ಎಲ್ಲಾ ಊರಿಗೆ ಮಿರ್ಜಾನ ಒಳ ಕೋಡ್ಕಣಿ ಮಾರ್ಗದಿಂದ ಬಸ್ ಸಂಚಾರ ಮಾಡುತ್ತಿದೆ.ಆದರೆ ಅದೆ ಬಸ್ ಈ ಎಲ್ಲಾ ಊರಿನಿಂದ ಪ್ರಯಾಣಿಕರನ್ನ ತುಂಬಿಕೊಂಡು ಕುಮಟಕ್ಕೆ ವಾಪಸ್ ಆಗುವಾಗ ದಿಕ್ಕು ಬದಲಿಸುವುದಲ್ಲದೆ. ಪ್ರಯಾಣಿಕರ ಹಣೆ ಬರಹ ಸಹ ಅದಲು ಬದಲು ಮಾಡುವ ಸಾಧ್ಯತೆ ಇದೆ.
ಈ ಬಸ್ ಕೋಡ್ಕಣಿಯಿಂದ ಚತುಷ್ಫಥ ರಾಷ್ಟ್ರೀಯ ಹೆದ್ದಾರಿ 66ರನ್ನ ಪ್ರವೇಶಿಸಿದ ಬಳಿಕ ಸರ್ವಿಸ್ ರಸ್ತೆ ಇಲ್ಲವೆ ಯೂರ್ಟನ್ ದಾಟಿಯೇ ಸಂಚರಿಸಬೇಕು. ಆದರೆ ಈ ಬಸ್ ಚಾಲಕ ಮುಖ್ಯ ಹೆದ್ದಾರಿಯಲ್ಲಿಯೇ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಕಳೆದ ಅನೇಕ ತಿಂಗಳುಗಳಿಂದ ನಡೆದುಕೊಂಡು ಬಂದಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಕೆಎಸ್ ಆರ್ ಟಿಸಿ ಅಧಿಕಾರಿಗಳ ಗಮನಕ್ಕ ಸಹ ತಂದಿದ್ದಾರೆ. ಆದರೆ ಆ ಅಧಿಕಾರಿಗಳಿಗೂ ಜನರ ಜೀವದ ಬಗ್ಗೆ ಕಾಳಜ ಇರುವಂತೆ ಕಾಣುತ್ತಿಲ್ಲ..
ಆದರೆ ಈ ಬಸ್ ಚಾಲಕರು ಆ ಕಡೆ ಹೋಗಿ ಬರಲು ಕಷ್ಟವಾಗುತ್ತದೆ ಅಂತಲೋ ಇನ್ನೂ ಬೇರೆ ಯಾವ ಕಾರಣಕ್ಕೆ ಗೋತ್ತಿಲ್ಲ. ಅಪಾಯಕಾರಿ ಅಲ್ಲದ ಮಾರ್ಗದಲ್ಲಿ ಸಂಚರಿಸಿ ಪ್ರಯಾಣಿಕರನ್ನ ಸುರಕ್ಷತೆ ಕಾಪಾಡುವ ಬದಲಿದೆ. ಉಲ್ಟಾ ಸಂಚಾರ ಮಾಡಿ ಪ್ರಯಾಣಿಕರ ಹಾಗೂ ತಮ್ಮಗೂ ಅಪಾಯವನ್ನ ಮೈ ಮೇಲೆ ಎಳೆದುಕೊಳ್ಳುವಂತೆ ಕಂಡು ಬರುತ್ತಿದೆ.
ಕೋಡ್ಕಣಿಯಿಂದ ಹೊರ ಬಿದ್ದ ತಕ್ಷಣ ಕುಮಟ ಕಡೆ ಹೋಗಬೇಕಿರುವ ಹೆದ್ದಾರಿ ಹೋಗಲು ಆ ಸ್ಥಳಲ್ಲಿ ಟರ್ನಿಂಗ್ ಪಾಯಿಂಟ್ ಇಲ್ಲ. ಆದರೆ ಅಲ್ಲೆ ಸ್ವಲ್ಪ ಮುಂದೆ ಕೋಡ್ಕಣಿ ಕ್ರಾಸ್ ನಿಂದ ಗೋಕರ್ಣ ಕಡೆ ಪ್ರಯಾಣಿಸಿ ನಾಗೂರು ಕ್ರಾಸ್ ಬಳಿ ಇರುವ ಟರ್ನಿಂಗ್ ಪಾಯಿಂಟ್ ಮೂಲಕ ಕುಮಟ ಕಡೆ ಸಲಭವಾಗಿ ಬಸ್ ಸಂಚಾರ ಮಾಡಬಹುದು.
ಅಪಘಾತವಾದರೆ ಯಾರು ಹೊಣೆ..?
ಈ ರೀತಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಅಪಘಾತವಾಗಿ ಬಸ್ ನಲ್ಲಿ ಇರುವ ಪ್ರಯಾಣಿಕರಿಗೆ ಏನಾದ್ರೂ ಸಮಸ್ಯೆ ಆದರೆ ಅದಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆ ಆ ಭಾಗದಿಂದ ಬಸ್ ನಲ್ಲಿ ಸಂಚರಿಸುವ ಪ್ರಯಾಣಿಕರ ಪ್ರಶ್ನೆಯಾಗಿದೆ. ಈ ಹಿಂದೆ ಇದೆ ರೀತಿ ಪ್ರಕರಣವೊಂದು ಅಂಕೋಲಾ ಸಮೀಪ ನಡೆದಿದ್ದು, ಅಪಘಾತದಿಂದ ಹಾನಿಯಾಗಿರುವುದಕ್ಕೆ ಸರಕಾರದಿಂದ ಯಾವುದೇ ಪರಿಹಾರ ಸಿಗದ ಉದಾರಣೆ ಇದೆ. ಹೀಗಿರುವಾಗ ಕೋಡ್ಕಣಿ ಮಾರ್ಗದಿಂದ ಹೊರ ಬರುವ ಬಸ್ ಚಾಲಕರು ಮಾತ್ರ ಯಾಕೆ ಈ ರೀತಿ ಸಮಸ್ಯೆ ಮೈ ಮೇಲೆ ಎಳೆದುಕೊಳ್ಳವಂತೆ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು..