ಸುದ್ದಿಬಿಂದು ಬ್ಯೂರೋ
ಕುಮಟ
:ನಿನ್ನೆ ಸಂಜೆಯ ವೇಳೆ ಹಿರೇಗುತ್ತಿ ರಾಷ್ಟ್ರೀಯ ಹೆದ್ದಾರಿ ( National Highway 66)ಪಕ್ಕದಲ್ಲಿ ವಾಯುವಿಹಾರಕ್ಕೆ ಹೋಗಿದ್ದ ವೇಳೆ ಟ್ಯಾಂಕರ್ ಅಪಘಾತದಲ್ಲಿ (Tanker Accident) ಗಂಭೀರವಾಗಿ ಗಾಯಗೊಂಡಿದ್ದ ನಿವೃತ್ತ ಶಿಕ್ಷಕನಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.

ವಿಠೋಬ ನಾರಾಯಣ ನಾಯಕ ಹಿರೇಗುತ್ತಿ ((82), (Hiregutti ) ಇವರು ನಿನ್ನೆ ಸಂಜೆ ಸಮಯದಲ್ಲಿ ಎಂದಿನಂತೆ ವಾಯು ವಿಹಾರಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನವನ್ನ ಚಲಾಯಿಸಿಕೊಂಡು ಬಂದ ಟ್ಯಾಂಕರ್ ಚಾಲಕ ತನ್ನ ವಾಹನವನ್ನ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ವಿಠೋಬ ನಾಯಕ ಅವರ ಕಾಲು ಹಾಗೂ ತಲೆಯ ಭಾಗದಲ್ಲಿ‌ ಗಾಯವಾಗಿತ್ತು.

ತಕ್ಷಣ ಅವರನ್ನ ಕುಮಟ ಸರಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯಿತ್ತಾದರೂ ಗಂಭೀರವಾಗಿ ಗಾಯವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ(Udupi), ಆದರ್ಶ ಆಸ್ಪತ್ರೆ(Adarsh ​​Hospital) ಸಾಗಿಸಲಾಗುತ್ತಿತ್ತು. ಆದರೆ ಈ ವೇಳೆ ಅವರು ಕುಂದಾಪುರ (Kundapur)ಸಮೀಪ ಹೋಗುತ್ತಿದ್ದಂತೆ ಮೃತಪಟ್ಟಿದ್ದಾರೆ.

ಇನ್ನೂ ಅಪಘಾತಕ್ಕೆ ಕಾರಣವಾಗಿದ್ದ ಟ್ಯಾಂಕರ್ ಹಿರೇಗುತ್ತಿ ಪೊಲೀಸ್ ಚೆಕ್ ಪೊಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದ್ದು, ಚಾಲಕ ತಮಿಳನಾಡಿನ(Tamil Nadu) ಕುಮಾರ ಎಂಬಾತನಿಗೆ ಬಂಧಿಸಲಾಗಿದೆ‌. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.