ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ ನಡೆದುಹೋಗಿದೆ.ಕೊರಳಲ್ಲಿ ಧರಿಸಿದ ಚಿನ್ನದ ಸರದಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ರೈತನ ಇಮೇಜ್ ಹೊತ್ತುಕೊಂಡು ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ನನ್ನು ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಬಂಧಿಸಿದ( Varthur Santhosh arrested,) ವಿಚಾರ ಇದೀಗ ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು, ಮಾಜಿ ಸಿ ಎಂ ಕುಮಾರ ಸ್ವಾಮಿ ಅವರ ಮನೆ ತನಕ ನೋಟಿಸ್ ಹೋಗಿದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ(former CM Kumaraswamy) ಅವರ ಪುತ್ರ ನಿಖಿಲ್ ಸ್ವಾಮಿ ಕೊರಳಲ್ಲಿ ಹುಲಿ ಉಗರು ಇರುವ‌ ಪೊಟೋ ಒಂದನ್ನ ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಈಗಾಗಲೆ ನೋಟಿಸ್ ಜಾರಿ ಮಾಡಿರುವ ವಿಚಾರ ರಾಜ್ಯಾದ್ಯಂತ ದೊಡ್ಡ ಸುದ್ದಿ ಆಗಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಿಖಿಲ್ ಕುಮಾರಸ್ವಾಮಿ(Nikhil Kumaraswamy)ಅವರ ತಂದೆ ಕುಮಾರಸ್ವಾಮಿ ಅವರು ತನ್ನ ಮಗ ನಿಖಿಲ್ ಗೆ ಆತನ ವಿವಾಹ ಸಮಯದಲ್ಲಿ ಸಂಬಂಧಿಕರು ಈ ಒಂದು ಹುಲಿ ಉಗುರು ಇರುವಂತಹಃ ಚೈನ್ ತೊಡೆಸಿದ್ದರು, ಮದುವೆ ದಿನ ಸಂಜೆ ನಾನೆ ನನ್ನ ಸೊಸೆಯನ್ನ ಕರೆದು ಈ ಹುಲಿ ಉಗುರು ಇರುವ ಚೈನ್ ಎಲ್ಲಿಂದ ಬಂತು ಎಂದು ಕೇಳಿದ್ದೆ ಅಗ ಅವಳು ನಮ್ಮ ಸಂಬಂಧಿಕರು ಹುಲಿ ಉಗುರು ಇರುವ ಚೈನ್ ಹಾಕಿರೋ ವಿಚಾರವನ್ನ ಹೇಳಿದ್ದರು.

ನಂತರಲ್ಲಿ ನಾನು ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದೆ ಆದರೆ ಅವತ್ತು ಅವರು ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ನಿಖಿಲ್ ಆ ಕ್ಷಣ ಅದನ್ನ ಹಾಕೊಂಡಿರೋದು ಬಿಟ್ಟರೆ ನಂತರದಲ್ಲಿ ಅದನ್ನ ಅವನು ಹಾಕಿರಲಿಲ್ಲ‌. ಇದನ್ನ ನಾನು ಹೇಳಿದ್ದರು ಕೂಡ ಅಧಿಕಾರಿಗಳು ಅವತ್ತು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ ಇಂದು ನೋಟಿಸ್ ನೀಡಿದ್ದಾರೆ‌. ಇವತ್ತು ನೀಡಿರುವ ನೋಟಿಸ್ ಗೆ ನಾನು ಉತ್ತರ ನೀಡಿದ್ದೇನೆ ಅಂತಾ ಮಾಜಿ ಸಿ ಎಂ ಕುಮಾರಸ್ವಾಮಿ ‌ಅವರು ಹೇಳುವ ಮೂಲಕ ಅಧಿಕಾರಿಗಳನ್ನೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.