ಸುದ್ದಿಬಿಂದು ಬ್ಯೂರೋ
ಭಟ್ಕಳ: ಇನ್ಸ್ಟಾಗ್ರಾಮ್ (Instagram)ಸ್ನೇಹಿತನ ಕಿರುಕುಳಕ್ಕೆ ಬೇಸತ್ತ ಯುವತಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಹಾಡವಳ್ಳಿಯಲ್ಲಿ ನಡೆದಿದೆ.

ನೇತ್ರಾ ಗೋವಾಳಿ ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯಾಗಿದ್ದಾಳೆ. ನೇತ್ರಾಳ ಇನ್ಸ್ಟಾಗ್ರಾಮ್ ಸ್ನೇಹಿತ ಗೋವರ್ಧನ್ ಮೊಗೇರ್ ಎಂಬಾತ ಕಳೆದ ಒಂದು ವರ್ಷದಿಂದ ಇನ್ಸ್ಟಾ ಗ್ರಾಮ ನಲ್ಲಿ ಪರಿಚಯವಾಗಿದ್ದು, ನೇತ್ರಾ ಮತ್ತು ಗೋವರ್ಧನ್ ಮುಕ್ತವಾಗಿ ಮಾತಾಡುತ್ತಿದ್ದರು ಎನ್ನಲಾಗಿದೆ

ನಂತರದ ದಿನದಲ್ಲಿ ಯುವಕ ನೇತ್ರಾ ಗೆ ಚಿತ್ರಹಿಂಸೆ ನೀಡಲು ಶುರುಮಾಡಿದ ಎನ್ನಲಾಗಿದ್ದು, ಖರ್ಚು ಮಾಡಿದ ಹಣವನ್ನ ನೀಡುವಂತೆ ಪೀಡಿಸುತ್ತಿದ್ದನಂತೆ. ಅಷ್ಟೆ ಅಲ್ಲದೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೊಟೊಗಳನ್ನ ಹರಿಬಿಡುವದಾಗಿ ಬ್ಲ್ಯಾಕ್ ಮೇಲ್ ಸಹ ಮಾಡಿದ್ದು ಈತನ ಕಿರುಕುಳಕ್ಕೆ(Harassment)ಬೇಸತ್ತ ನೇತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನೇತ್ರಾ ತಂದೆಯಿಂದ ಗೋವರ್ಧನ್ ವಿರುದ್ದ ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು,, ಮಗಳ ಸಾವಿಗೆ ಗೋವರ್ಧನ್ ಕಾರಣ ಎಂದು ದೂರಿನಲ್ಲಿ ದಾಖಲಿಸಲಾಗಿದೆ.