ಕಾರವಾರ : ರಾಜ್ಯ ಬಿಜೆಪಿಯಲ್ಲಿ ಇದೀಗ ರಾಜ್ಯಾಧ್ಯಾಕ್ಷರ ಆಯ್ಕೆ ವಿಚಾರ ವ್ಯಾಪಕ ಚರ್ಚೆಯಾಗುತ್ತಿದ್ದು, ಉತ್ತರಕನ್ನಡ ಜಿಲ್ಲೆಯ ಹಾಲಿ ಸಂಸದ ಹಾಗೂ ಬಿಜೆಪಿ ಫೈರ್ ಬ್ರಾಂಡ್(Fire Brand)ಅನಂತಕುಮಾರ ಹೆಗಡೆ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಉತ್ತರಕನ್ನಡ(Utara kannda)ಜಿಲ್ಲೆಯ ಲೋಕಾಸಭಾ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿರುವ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನ( BJP State President) ನೀಡಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಬಹುದು ಎನ್ನುವುದು ಮೂಲ ಬಿಜೆಪಿ ಹಾಗೂ ಆರ್ ಎಸ್ ಎಸ್ ನ(RSS) ಸಂಘಟಕರ ಅಭಿಪ್ರಾಯವಾಗಿದೆ ಎನ್ನಲಾಗಿದೆ.
ಕರಾವಳಿ ಜಿಲ್ಲೆಯಲ್ಲಿ ಅನಂತಕುಮಾರ ಹೆಗಡೆ ಚಿರಪರಿಚಿತ, ಕಾರ್ಯಕರ್ತರು ಮಾತ್ರವಲ್ಲದೆ, ಮತದಾರರು ಕೂಡ ಅನಂತಕುಮಾರ ಹೆಗಡೆಯವರನ್ನ ಮೆಚ್ಚಿಕೊಳ್ಳುತ್ತಾರೆ.ಕರಾವಳಿ ಜಿಲ್ಲೆಯ ಜನ ಮೋದಿಗಿಂತ ಅನಂತಕುಮಾರ ಹೆಗಡೆ ಅವರನ್ನ ಮೆಚ್ಚಿಕೊಂಡಿದ್ದಾರೆ.
ಅವರು ಯಾವುದೆ ಚುನಾವಣಾ ಪ್ರಚಾರಕ್ಕೆ ಒಮ್ಮೆ ಹೋದರೆ ಸೋಲುವ ಅಭ್ಯರ್ಥಿ ಸಹ ಗೆದ್ದಿರುವ ಉದಾರಣೆಗಳಿದೆ. ಒಂದೊಮ್ಮೆ ಬಿಜೆಪಿ ಹೈಮಾಂಡ ಅನಂತಕುಮಾರ ಹೆಗಡೆ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಲ್ಲಿ ಹಳಿ ತಪ್ಪಿದಂತಾಗಿರುವ ಬಿಜೆಪಿಗೆ ಸರಿಯಾದ ಮಾರ್ಗದಲ್ಲಿ ಹೋಗಬಹುದು ಎನ್ನುವುದು ಅನೇಕರ ಲೆಕ್ಕಾಚಾರ ಅಡಗಿದೆ.
ಅನಂತಕುಮಾರ ಹೆಗಡೆ ಉತ್ತರಕನ್ನಡ ಜಿಲ್ಲೆಗೆ ಮಾತ್ರ ಸಿಮೀತವಾಗಿರುವ ನಾಯಕರಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಸಹ ಅವರ ಹೆಸರೂ ಇಂದಿಗೂ ಪ್ರಚಲಿತದಲ್ಲಿದೆ. ಹೀಗಾಗಿ ಅನಂತಕುಮಾರ ಹೆಗಡೆ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೆ(Ananthkumar Named for BJP State President)ಕರ್ನಾಟಕದಲ್ಲಿ ಮತ್ತೆ ಬಿಜೆಪಿಗೆ ಇನ್ನೂ ಹೆಚ್ಚಿನ ಶಕ್ತಿ ಬರಲು ಸಾಧ್ಯಎನ್ನುವ ಮಾತು ಕೇಳಿಬರುತ್ತಿದೆ.